newsics.com
ನಟಿ ಸೋನು ಗೌಡ ಎರಡು ಸಲ ಕಳ್ಳತನ ಮಾಡಿದ್ರಂತೆ ಈ ಬಗ್ಗೆ ಸ್ವತಃ ಅವರೇ ಹೇಳಿದ್ದು ಕೇಳಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಸಿದ್ಲಿಂಗು 2 ಸಿನಿಮಾ ಪ್ರಮೋಷನ್ ನಡೆದಿದೆ. ಆಗ ಲೂಸ್ ಮಾದಾ ಯೋಗಿ, ನಟಿ ಸೋನು ಗೌಡ ಹಾಗೂ ನಿರ್ದೇಶಕ ವಿಜಯ್ ಪ್ರಸಾದ್ ಭಾಗಿಯಾಗಿದ್ದರು.
ಚಿತ್ರೀಕರಣದ ವೇಳೆ ನಡೆದ ಘಟನೆಗಳು, ಕಥೆ ಒಪ್ಪಿಕೊಳ್ಳಲು ಕಾರಣ ಹೀಗೆ ಹಲವಾರು ವಿಚಾರಗಳನ್ನು ಚರ್ಚೆ ಮಾಡುವಾಗ ಸೋನು ಗೌಡ ರಿವೀಲ್ ಮಾಡಿದ್ದು ನಿಜಕ್ಕೂ ಒಂದು ಇಂಟ್ರೆಸ್ಟಿಂಗ್ ಮ್ಯಾಟರ್. ಅದುವೇ ಕಳ್ಳತನ …..ಸೋನು ಗೌಡ ಬಗ್ಗೆ ಗುಣಗಾನ ಮಾಡಬೇಕು ಏಕೆಂದರೆ ಆಕೆಗೆ ಕದಿಯುವ ಚಟ ಇದೆ ಎಂದು ಸೃಜನ್ ಲೋಕೇಶ್ ರಿವೀಲ್ ಮಾಡಿದ್ದಾರೆ.
ಸೋನುಗೌಡ ಸ್ಕೂಲ್ ಟೈಮ್ ನಲ್ಲಿ ಇದ್ದಾಗ ಅವರ ಅಣ್ಣನಿಗೆ ಮೊದಲ ಸಂಬಳದಲ್ಲಿ ಏನಾದರೂ ಕೊಡ್ಸು ಅಂತ ಕೇಳಿದ್ರಂತೆ. ಅದಕ್ಕೆ ಸೋನುಗೌಎ ಮತ್ತು ಅವರ ತಂಗಿ ಶಾಪಿಂಗ್ ಮಾಡಿದ್ರಂತೆ. ಆಗ ಅವರಿಗೆ ಎರಡು ಟಾಪ್ ಇಷ್ಟ ಆಗಿತ್ತಂತೆ. ಆದ್ರೆ ಅವರು ಒಂದು ಟಾಪ್ ಖರೀದಿ ಮಾಡಿ, ಇನ್ನೊಂದನ್ನ ಧರಿಸಿದ್ದ ಟಾಪ್ ಒಳಗೆ ಹಾಕಿಕೊಂಡು ಅಂಗಡಿಯಿಂದ ಹೊರ ಬಂದಿದ್ರಂತೆ.
ಮತ್ತೊಂದು ಘಟನೆ ಬಗ್ಗೆ ವಿವರಿಸಿದ ಸೋನುಗೌಡ, ಗೋವಾದಲ್ಲಿ ಬೆಳ್ಳಿ ಬೆಲೆ ತುಂಬಾ ಜಾಸ್ತಿ ಅಲ್ಲಿ ಜನಪ್ರಿಯ ಸಿಲ್ವರ್ ಮಾರ್ಕೆಟ್ ಇದೆ. ಒಂದು ಯಾವುದೋ ತುಂಬಾ ಇಷ್ಟ ಆಯ್ತು ಅದನ್ನು ನನ್ನ ಗರ್ಲ್‌ಫ್ರೆಂಡ್‌ಗೆ ಕೊಡಬೇಕು ಅಂತ ಅಣ್ಣ ಹೇಳಿದ್ದ. ಇಷ್ಟ ಆಯ್ತಾ ಅಂತ ಕೇಳಿ ನನ್ನ ತಂಗಿ ಅದನ್ನು ಬಾಯಿಗೆ ಹಾಕಿಕೊಂಡುಬಿಟ್ಟಳು. ಆಗ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ಓಡು ಓಡು ಅಂತ ಅಲ್ಲಿಂದ ಜಾಗ ಕಾಲಿ ಮಾಡಿದ್ದು’ ಎಂದು ಸೋನು ಗೌಡ ಹೇಳಿದ್ದಾರೆ.
ಸಿದ್ಲಿಂಗು ಸಿನಿಮಾ ಆಫರ್ ಬಂದಾಗ ಸೋನು ತುಂಬಾನೇ ಯೋಚನೆ ಮಾಡಿದ್ದಾರೆ. ತಮ್ಮ ಸಂಪರ್ಕದಲ್ಲಿ ಇರುವ ಹಲವರ ಬಳಿ ನಿರ್ದೇಶಕರು ಮತ್ತು ಕಥೆ ಬಗ್ಗೆ ಚರ್ಚೆ ಮಾಡಿದ್ದಾರೆ. ಅಯ್ಯೋ ಆ ನಿರ್ದೇಶಕರ ಜೊತೆ ಚೆನ್ನಾಗಿ ಇರಿ ಎಂದು ಒಬ್ಬರು ಸಲಹೆ ಕೊಟ್ಟಿದ್ದಾರೆ. ಆದರೂ ಕಥೆ ಇಷ್ಟವಾಗಿದ್ದಕ್ಕೆ ಸಿನಿಮಾ ಒಪ್ಪಿಕೊಂಡು ಮುಂದುವರೆದಿದ್ದಾರೆ. ಅಲ್ಲಿಗೆ ನಿರ್ದೇಶಕರು ನಿಜಕ್ಕೂ ಒಳ್ಳೆಯ ಮನುಷ್ಯ ಎಂದು ಅರ್ಥವಾಗಿತ್ತು ಎಂದಿದ್ದಾರೆ.
https://www.instagram.com/reel/DF_0TUHiGnB/?igsh=bGc5NWg3ZHAxNmgw