newsics.com
ನವದೆಹಲಿ: ನಿರೀಕ್ಷೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್ನ ಮಾನಿಟರಿ ಪಾಲಿಸಿ ಕಮಿಟಿ ರೆಪೋ ದರವನ್ನು 0.25 ಪ್ರತಿಶತದಷ್ಟು ಇಳಿಕೆ ಮಾಡುವ ನಿರ್ಧಾರ ಕೈಗೊಂಡಿದೆ.
ಮೊನ್ನೆಯಿಂದ ನಡೆದಿದ್ದ ಎಂಪಿಸಿ ಸಭೆಯ ಬಳಿಕ ಶುಕ್ರವಾರ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ನಿರ್ಧಾರ ಪ್ರಕಟಿಸಿದ್ದಾರೆ.
ಶೇ.6.50ರಷ್ಟಿದ್ದ ಬಡ್ಡಿದರವನ್ನು ಶೇ. 6.25ಕ್ಕೆ ಇಳಿಸಲಾಗಿದೆ. ಹತ್ತಿರ ಹತ್ತಿರ ಐದು ವರ್ಷಗಳ ಬಳಿಕ ಮೊದಲ ಬಾರಿಗೆ ಆರ್ಬಿಐನ ರೆಪೋ ದರ ಇಳಿಕೆಯಾಗಿದೆ.
ಈ ಬಾರಿ 25 ಮೂಲಾಂಕಗಳಷ್ಟು ಇಳಿಕೆ ಆಗುತ್ತದೆ ಎಂದು ಬಹುತೇಕ ಆರ್ಥಿಕ ತಜ್ಞರು ನಿರೀಕ್ಷಿಸಿದ್ದರು.
ಎಂಪಿಸಿಯಲ್ಲಿರುವ ಎಲ್ಲಾ ಆರು ಸದಸ್ಯರು ಸರ್ವಾನುಮತದಿಂದ 25 ಮೂಲಾಂಕಗಳಷ್ಟು ಬಡ್ಡಿದರ ಇಳಿಸಲು ನಿರ್ಧರಿಸಿದ್ದಾರೆ. ಹಣದುಬ್ಬರ ನಿಯಂತ್ರಣಕ್ಕೆ ಬರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಹಣಕಾಸು ನೀತಿ ಸಮಿತಿಯು ರೆಪೋ ದರ ಇಳಿಸುವ ರಿಸ್ಕ್ ತೆಗೆದುಕೊಂಡಿದೆ.
ಈ ರೆಪೋ ದರ ಇಳಿಕೆಯಿಂದ ಬ್ಯಾಂಕುಗಳ ಸಾಲದರಗಳು ಕಡಿಮೆಗೊಳ್ಳುವ ಸಾಧ್ಯತೆ ಇದೆ. ಅದು ಆದಲ್ಲಿ ಸಾಲದ ಇಎಂಐ ಮೊತ್ತ ತುಸು ಕಡಿಮೆಯಾಗಬಹುದು.
ಪೋಕ್ಸೋ ಪ್ರಕರಣ: ಮಾಜಿ ಸಿಎಂ ಬಿಎಸ್ವೈಗೆ ಹೈಕೋರ್ಟ್ ಜಾಮೀನು, ಬಂಧನ ಭೀತಿಯಿಂದ ಪಾರು
ಮುಡಾ ಹಗರಣ: ಸಿಬಿಐ ತನಿಖೆ ಅಗತ್ಯವಿಲ್ಲವೆಂದ ಹೈಕೋರ್ಟ್, ಸಿಎಂ ನಿಟ್ಟುಸಿರು