newsics.com
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಇಡೀ ಕುಟುಂಬವೇ ಸಾವಿನ ಮನೆ ಸೇರಿದೆ.
ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.
ಒಂದು ವರ್ಷದ ಮಗು ಹನುಮಂತ(1), ಹನುಮಂತ ತಂದೆ ಆಂಜನೇಯ (35) ತಾಯಿ ಗಂಗಮ್ಮ (28), ಹನುಮಂತನ ಸಹೋದರನ ಮಕ್ಕಳಾದ ಪವಿತ್ರ (5) ಹಾಗೂ ರಾಯಪ್ಪ (3) ಮೃತಪಟ್ಟವರು.
ಮೂವರು ಮಕ್ಕಳು ಸೇರಿ ಒಂದೇ ಬೈಕ್ ನಲ್ಲಿ ಐವರು ಸುರಪುರದಿಂದ ತಿಂಥಣಿ ಕಡೆಗೆ ಹೊರಟಿದ್ದರು. ಆ ವೇಳೆ ಹಿಂಬದಿಯಿಂದ KA 32 F 2684 ನಂಬರಿನ ಕೆಎಸ್ಆರ್ಟಿಸಿ ಬಸ್ ರಭಸವಾಗಿ ಗುದ್ದಿದೆ. ಅಪಘಾತದಲ್ಲಿ ಇಡೀ ಕುಟುಂಬವೇ ಬಲಿಯಾಗಿದೆ.
ಗುದ್ದಿದ ರಭಸಕ್ಕೆ ಬೈಕ್ನಲ್ಲಿದ್ದ ಮೂರು ಎರಡು ಪುಟ್ಟ ಪುಟ್ಟ ಮಕ್ಕಳು ಉಸಿರು ಚೆಲ್ಲಿವೆ. ಬಟ್ಟೆ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಬೈಕ್ ಸಂಪೂರ್ಣ ಜಖಂಗೊಂಡಿದೆ.
Political analysis ರಾಜ್ಯ ಬಿಜೆಪಿಯಲ್ಲೀಗ ನಿಜದ ಕದನ ಆರಂಭ: ಅಧ್ಯಕ್ಷ ಸ್ಥಾನ ಪೈಪೋಟಿಗಿಳಿದ ಶ್ರೀರಾಮುಲು
election campaign, ಎಲೆಕ್ಷನ್ ಕ್ಯಾಂಪೇನ್ ವೇಳೆ ಮಹಿಳೆಗೆ ಕಿಸ್ ಕೊಟ್ಟ ಎಎಪಿ ಶಾಸಕ