newsics.com
ಚಾಮರಾಜನಗರ: ಬಾರ್ ಮುಂದೆಯೇ ಮದ್ಯಪ್ರಿಯರು ಪ್ರತಿಭಟನೆ ನಡೆಸಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಶ್ರೀರಂಗ ವೈನ್ಸ್ ಶಾಪ್‌ನಲ್ಲಿ MRP ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಹಿನ್ನೆಲೆ ರೊಚ್ಚಿಗೆದ್ದ ಮದ್ಯ ಪ್ರಿಯರು ಪ್ರತಿಭಟನೆ ನಡೆಸಿದ್ದಾರೆ.
ಹೆಸರಿಗೆ ಎಂಆರ್‌ಪಿ ಬೋರ್ಡ್ ಹಾಕಿದ್ದಾರೆ. ಆದರೆ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ನಿನ್ನೆ ರಾತ್ರಿ ವೈನ್ಸ್ ಸ್ಟೋರ್ ಮುಂದೆ ಜಮಾಯಿಸಿದ ಕುಡುಕರು ವೈನ್ಸ್ ಸ್ಟೋರ್ ಮಾಲೀಕರಿಗೆ ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಹರಸಾಹಸಪಟ್ಟು ಮದ್ಯಪ್ರಿಯರ ಮನವೊಲಿಸುವಲ್ಲಿ ಯಶಸ್ವಿಯಾದ ಪೊಲೀಸರು ಪೊಲೀಸರ ಮನವೊಲಿಸಿದ ಬಳಿಕ ಮನೆಕಡೆ ನಡೆದಿದ್ದಾರೆ.