newsics.com
ಬೆಂಗಳೂರು: ಕನ್ನಡದ ವಜ್ರಕಾಯ ಸಿನಿಮಾ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ನಭಾ ನಟೇಶ್ ಸಿನಿಮಾ ಆಫರ್ಗಾಗಿ ಕಾಯ್ತಿದ್ದಾರೆ. ಹೊಸ ಹೊಸ ಫೋಟೋಶೂಟ್ಗಳ ಮೂಲಕ ಮಿಂಚುತ್ತಿದ್ದಾರೆ. ನಭಾ ನಟೇಶ್ ಹಾಟ್ ಫೋಟೋ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಕ್ಯಾಮೆರಾ ಮುಂದೆ ಕೋಟನ್ನು ಬಿಚ್ಚಿ ಹಾಟ್ ಆಂಗಲ್‌ಗಳೊಂದಿಗೆ ಸಾಕಷ್ಟು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ನಭಾ ನಟೇಶ್ ಚಿತ್ರಗಳು ವಿಫಲವಾಗುತ್ತಿರುವುದರಿಂದ ಸಿನಿಮಾ ಅವಕಾಶಗಳು ಬರುತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ವಿಟ್ ಆಗಿರುತ್ತಾರೆ. ಮೊದಲಿನಿಂದಲೂ ಸೌಂದರ್ಯದ ದೊಡ್ಡ ಅಭಿಮಾನಿ ಬಳಗವನ್ನು ಪಡೆದ ಈಕೆ ಇತ್ತೀಚೆಗಷ್ಟೇ ಹಾಟ್ ಶೂಟ್ ಮಾಡಿಸಿಕೊಂಡು ಬಂದಿದ್ದಾಳೆ.
ನಟಿ ನಭಾ ನಟೇಶ್ ಅವರು 2015ರಲ್ಲಿ ರಿಲೀಸ್ ಆದ ಕನ್ನಡದ ‘ವಜ್ರಕಾಯ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. 2019ರಲ್ಲಿ ರಿಲೀಸ್ ಆದ ತೆಲುಗಿನ ‘ಇಸ್ಮಾರ್ಟ್ ಶಂಕರ್’ ಚಿತ್ರದ ಮತ್ತಷ್ಟು ಜನಪ್ರಿಯತೆ ಪಡೆದರು. ಇದೀಗ ಲೇಟೆಸ್ಟ್ ಫೋಟೋಶೂಟ್ ಮೂಲಕ ಮಿಂಚಿದ್ದಾರೆ. ಗ್ರೇ ಕಲರ್ ಡ್ರೆಸ್ನಲ್ಲಿ ಸಖತ್ ಆಗಿ ಕಾಣ್ತಿದ್ದಾರೆ. ನಟಿ ಫೋಟೋಗೆ ಲೈಕ್ ಹಾಗೂ ಕಮೆಂಟ್ಗಳ ಸುರಿಮಳೆ ಆಗಿದೆ.