Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕಿಚ್ಚ ಸುದೀಪ್ ಅತ್ಯುತ್ತಮ ನಟ, ಅನುಪಮಾ ಗೌಡ ಅತ್ಯುತ್ತಮ ನಟಿ, ದರ್ಶನ್‌ ಸಿನಿಮಾಗೂ ಅವಾರ್ಡ್!
ಕರ್ನಾಟಕಪ್ರಮುಖಮನರಂಜನೆ

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕಿಚ್ಚ ಸುದೀಪ್ ಅತ್ಯುತ್ತಮ ನಟ, ಅನುಪಮಾ ಗೌಡ ಅತ್ಯುತ್ತಮ ನಟಿ, ದರ್ಶನ್‌ ಸಿನಿಮಾಗೂ ಅವಾರ್ಡ್!

Share
3 Min Read
SHARE

newsics.com

ಬೆಂಗಳೂರು: 2019ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಸುದೀಪ್ ಅವರಿಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ಸಿಕ್ಕಿದೆ. ‘ಪೈಲ್ವಾನ್’ ಚಿತ್ರದಲ್ಲಿನ ನಟನೆಗೆ ಸುದೀಪ್ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಟಿ, ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಪಮಾ ಗೌಡ ಅವರಿಗೆ 2019ನೇ ಸಾಲಿನ ‘ಅತ್ಯುತ್ತಮ ನಟಿ’ ರಾಜ್ಯ ಪ್ರಶಸ್ತಿ ನೀಡಲಾಗಿದೆ. ದಯಾಳ್ ಪದ್ಮನಾಭನ್ ನಿರ್ದೇಶನದ ‘ತ್ರಯಂಬಕಂ’ ಚಿತ್ರದ ನಟನೆಗಾಗಿ ಅನುಪಮಾ ಗೌಡ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ

‘ಪೈಲ್ವಾನ್’ ಸಿನಿಮಾಗೆ ಎಸ್. ಕೃಷ್ಣ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಅವರು ಕುಸ್ತಿ ಪಟುವಾಗಿ ಕಾಣಿಸಿಕೊಂಡಿದ್ದಾರೆ. 2019ರ ಸೆಪ್ಟೆಂಬರ್ 12ರಂದು ‘ಪೈಲ್ವಾನ್’ ಚಿತ್ರ ಬಿಡುಗಡೆ ಆಗಿತ್ತು.

ಪಿ. ಶೇಷಾದ್ರಿ ನಿರ್ದೇಶನ ಮಾಡಿದ ‘ಮೋಹನದಾಸ’ ಸಿನಿಮಾಗೆ ‘ಅತ್ಯುತ್ತಮ ಚಿತ್ರ’ ಪ್ರಶಸ್ತಿ ಸಿಕ್ಕಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶನದ ‘ಲವ್ ಮಾಕ್ಟೇಲ್’ 2ನೇ ‘ಅತ್ಯುತ್ತಮ ಸಿನಿಮಾ’ ಪ್ರಶಸ್ತಿ ಪಡೆದಿದೆ. ‘ಅರ್ಘ್ಯಂ’ 3ನೇ ಅತ್ಯುತ್ತಮ ಸಿನಿಮಾ ಆಗಿದೆ. ‘ಕನ್ನೇರಿ’ ಚಿತ್ರಕ್ಕೆ ‘ವಿಶೇಷ ಸಾಮಾಜಿಕ ಕಾಳಜಿಯ ಸಿನಿಮಾ’ ಪ್ರಶಸ್ತಿ ನೀಡಲಾಗಿದೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಸಿನಿಮಾಗೆ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ನೀಡಲಾಗಿದೆ.

‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾದಲ್ಲಿನ ಅಭಿನಯಕ್ಕೆ ತಬಲಾ ನಾಣಿ ಅವರು ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅನುಷಾ ಕೃಷ್ಣ ಅವರು ‘ಬ್ರಾಹ್ಮಿ’ ಚಿತ್ರದಲ್ಲಿನ ನಟನೆಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ.

ದರ್ಶನ್ ನಟನೆಯ ‘ಯಜಮಾನ’ ಚಿತ್ರಕ್ಕಾಗಿ ವಿ. ಹರಿಕೃಷ್ಣ ಅವರು ‘ಅತ್ಯುತ್ತಮ ಸಂಗೀತ ನಿರ್ದೇಶನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಮಿಂಚುಹುಳು’ ಚಿತ್ರಕ್ಕಾಗಿ ಮಾಸ್ಟರ್ ಪ್ರೀತಂ ಅವರಿಗೆ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಸಿಕ್ಕಿದೆ.

‘ಸುಗಂಧಿ’ ಸಿನಿಮಾದಲ್ಲಿನ ಅಭಿನಯಕ್ಕೆ ಬೇಬಿ ವೈಷ್ಣವಿ ಅಡಿಗ ಅವರಿಗೆ ಅತ್ಯುತ್ತಮ ಬಾಲನಟಿ ಪ್ರಶಸ್ತಿ ನೀಡಲಾಗಿದೆ.

‘ಲವ್ ಮಾಕ್ಟೇಲ್’ ಚಿತ್ರದ ಗೀತೆಗಾಗಿ ರಘು ದೀಕ್ಷಿತ್ ಅವರು ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಪಡೆದಿದ್ದಾರೆ. ‘ರಾಗ ಭೈರವಿ’ ಸಿನಿಮಾದಲ್ಲಿನ ಗೀತೆಗಾಗಿ ಜಯದೇವಿ ಝಮ ಶೆಟ್ಟಿ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ನೀಡಲಾಗಿದೆ.

2019ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಅವಾರ್ಡ್ ಪಡೆದವರ ಪಟ್ಟಿ.

ಅತ್ಯುತ್ತಮ ಚಿತ್ರ : ಮೋಹನದಾಸ
ಪಿ. ಶೇಷಾದ್ರಿ ನಿರ್ದೇಶನದ ಚಿತ್ರ

ದ್ವಿತೀಯ ಅತ್ಯುತ್ತಮ ಚಿತ್ರ : ಲವ್ ಮಾಕ್ ಟೈಲ್
ಡಾರ್ಲಿಂಗ್ ಕೃಷ್ಣ ನಿರ್ದೇಶನದ ಚಿತ್ರ

ತೃತಿಯ ಅತ್ಯುತ್ತಮ ಚಿತ್ರ : ಅರ್ಘ್ಯೂಂ
ವೈ ಶ್ರೀನಿವಾಸ್ ನಿರ್ದೇಶನ

ಅತ್ಯುತ್ತಮ ನಟ ಪ್ರಶಸ್ತಿ: ನಟ ಕಿಚ್ಚ ಸುದೀಪ್
ಪೈಲ್ವಾನ್ ಚಿತ್ರಕ್ಕಾಗಿ

ಅತ್ಯುತ್ತಮ ನಟಿ:
ಅನುಪಮಾ ಗೌಡ
ತ್ರಯಂಬಕಂ ಸಿನಿಮಾಗಾಗಿ

ಅತ್ಯುತ್ತಮ ಪೋಷಕ ನಟ
ತಬಲಾ ನಾಣಿ (ಕಮೆಸ್ಟ್ರಿ ಆಫ್ ಕರಿಯಪ್ಪ)

ಅತ್ಯುತ್ತಮ ಪೋಷಕ ನಟಿ
ಅನುಷಾ ಕೃಷ್ಣ (ಬ್ರಾಹ್ಮಿಂ)

2019ರ ಅತ್ಯತ್ತಮ ನಟ ಪ್ರಶಸ್ತಿಯನ್ನು ನಟ ಕಿಚ್ಚ ಸುದೀಪ್ ಅವರು ತಮ್ಮ ಪೈಲ್ವಾನ್ ಚಿತ್ರಕ್ಕಾಗಿ ಪಡೆದುಕೊಂಡಿದ್ದಾರೆ. ಅಚ್ಚರಿ ಎಂಬಂತೆ, ನ ಟಕಿಚ್ಚ ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರ ಸೂಪರ್ ಹಿಟ್ ಆದ ಸಮಯದಲ್ಲೇ ನಟ ಸುದೀಪ್ ಅವರಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. 2024ರ ಕೊನೆಯ ವಾರದಲ್ಲಿ ಬಿಡುಗಡೆ ಕಂಡು ಜಯಭೇರಿ ಭಾರಿಸಿರುವ ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರವು 2024ರ ಸೂಪರ್ ಹಿಟ್ ಚಿತ್ರ ಎಂಬ ಖ್ಯಾತಿ ಪಡೆದಿದೆ. ಇದೀಗ, 2019ರ ಸಿನಿಮಾ ಪೈಲ್ವಾನ್‌ಗಾಗಿ ನಟ ಸುದೀಪ್ ಅವರು ಪ್ರಶಸ್ತಿ ಪಡೆದಿದ್ದಾರೆ.

ಇನ್ನು ತ್ರಯಂಬಕಂ ಸಿನಿಮಾಗಾಗಿ ನಟಿ ಅನುಪಮಾ ಗೌಡ ಅವರು 2019ರ ಸಾಲಿನ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ತಮ್ಮ ಮನಮುಟ್ಟುವ ನಿರೂಪಣೆಯಿಂದ ಕರುನಾಡಿನಲ್ಲಿ ತಮ್ಮದೇ ಆದ ಒಂದು ವಿಶೇಷ ಸ್ಥಾನ ಪಡೆದುಕೊಂಡಿದ್ದಾರೆ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ. ಇದೀಗ ಸಿನಿಮಾ ನಟನೆಗಾಗಿ ಅವಾರ್ಡ್ ಪಡೆದಿದ್ದು, ತಾವು ನಟಿಸಿದ ಕೆಲವೇ ಸಿನಿಮಾಗಳಲ್ಲಿ ಒಂದಾಗಿರುವ ‘ತ್ರಯಂಬಕಂ’ ಅವರ ಕೈಹಿಡಿದಿದೆ.

ಪ್ರಶಸ್ತಿ ಪಡೆದವರಲ್ಲಿ ಬಹಳಷ್ಟು ಖ್ಯಾತನಾಮರು ಇದ್ದಾರೆ, ನಿರ್ದೇಶಕರಾದ ಪಿ ಶೇಷಾದ್ರಿ, ಡಾರ್ಲಿಂಗ್ ಕೃಷ್ಣ ಹಾಗೂ ನಟ ತಬಲಾ ನಾಣಿ ಈ ಲಿಸ್ಟ್‌ನಲ್ಲಿ ಸೇರಿದ್ದಾರೆ.

ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದ್ದರಲ್ಲಿ ಅಂತೂ ಇಂತೂ ಒಂದು ವರ್ಷದ ಪ್ರಶಸ್ತಿಉ ಸಿಕ್ಕಂತಾಗಿದೆ, ಮಿಕ್ಕ 5 ವಾರ್ಷಿಕ ಪ್ರಶಸ್ತಿಗಳಿಗಾಗಿ ಚಿತ್ರರಂಗ ನಿರೀಕ್ಷಿಸುತ್ತಿದೆ.

Renukaswamy Murder Case ದರ್ಶನ್‌ ಜಾಮೀನು ರದ್ದುಗೊಳಿಸಿ – ಸುಪ್ರೀಂಗೆ 1492 ಪುಟಗಳ ದಾಖಲೆ ಸಲ್ಲಿಕೆ

POSH Committee ಇನ್ಮೇಲೆ ಪಲ್ಲಂಗಕ್ಕೆ ಕರೆದವರೆಲ್ಲಾ ಜೈಲು ಕಂಬಿ ಎಣಿಸೋದು ಗ್ಯಾರಂಟಿ

ತೆಳ್ಳಗೆ ಇರುವವರೇ ಎಚ್ಚರ: ನಿಮಗೆ `ಹೃದಯಾಘಾತದ’ ಅಪಾಯ ಹೆಚ್ಚು

TAGGED:Anupama Gowda Best ActressDarshan Movie Award too!State Film Award Announced: Kichcha Sudeep Best Actor
Share This Article
Facebook Twitter Copy Link Print
Previous Article ಆಪತ್ಕಾಲದಲ್ಲಿ ಆಸ್ಪತ್ರೆಗೆ ಸೇರಿಸಿದ ಆಟೋ ಡ್ರೈವರ್ ಭೇಟಿಯಾದ ಸೈಫ್
Next Article ವಾಟರ್ ಟ್ಯಾಂಕ್ ಏರಿ ಪ್ರೀತಿಸಿದವನ ಜತೆ ಮದುವೆ ಮಾಡುವಂತೆ ಪಟ್ಟು ಹಿಡಿದ ಯುವತಿ ! ವಿಡಿಯೋ ವೈರಲ್

Popular Posts

Gold-Silver Price Today ಚಿನ್ನ ಬೆಳ್ಳಿ ದರದಲ್ಲಿ ಇಳಿಕೆ : ಇಂದಿನ ಬೆಲೆ ಎಷ್ಟು?

1 Min Read

Panchak ನಾಳೆಯಿಂದ 5 ದಿನ ಈ ಕೆಲಸ ಮಾಡಬೇಡಿ, ಪಂಚಕದಿಂದ ಸಮಸ್ಯೆ ಫಿಕ್ಸ್

2 Min Read

KH Muniyappa ರಾಮಲಿಂಗಾರೆಡ್ಡಿ ಬೆನ್ನಲ್ಲೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್ ಮುನಿಯಪ್ಪ ಮುಂದು

1 Min Read

Bollywood ಕ್ಯಾಮೆರಾ ಕಂಡ ತಕ್ಷಣ ಗರ್ಲ್​ಫ್ರೆಂಡ್​ನ ತಳ್ಳಿದ ಸೈಫ್ ಮಗ : ವಿಡಿಯೋ ವೈರಲ್

1 Min Read

You Might Also Like

ದೇಶಪ್ರಮುಖ

RBI Repo Rate ಸಾಲಗಾರರಿಗೆ ಸಿಹಿಸುದ್ದಿ : RBI ರೆಪೋ ದರ ಯಥಾಸ್ಥಿತಿ (5.25%) ಮುಂದುವರಿಕೆ

1 Min Read
ದೇಶಪ್ರಮುಖ

Annamalai resigns ಬಿಜೆಪಿಗೆ ಕೆ.ಅಣ್ಣಾಮಲೈ ನೀಡಿದ್ದ ರಾಜೀನಾಮೆ ಅಂಗೀಕರಿಸಿದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್

1 Min Read
ಕರ್ನಾಟಕಪ್ರಮುಖ

ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ

1 Min Read
ದೇಶಪ್ರಮುಖ

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?