newsics.com
ಸಂಕ್ರಾಂತಿಗೆ ಸ್ಟಾರ್ ನಟರ ಸಿನಿಮಾಗಳು ಒಟ್ಟೊಟ್ಟಿಗೆ ಬಿಡುಗಡೆ ಆಗಿವೆ. ಜನವರಿ 10 ರಂದು ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ ಆಗಿತ್ತು. ಭಾನುವಾರ ನಂದಮೂರಿ ಬಾಲಕೃಷ್ಣ ನಟನೆಯ ‘ಢಾಕೂ ಮಹಾರಾಜ್’ ಸಿನಿಮಾ ತೆರೆಗೆ ಬಂದಿದೆ.
ಹೌದು, ಜನವರಿ 10ರಂದು ಬಿಡುಗಡೆ ಆಗಿದ್ದ ‘ಗೇಮ್ ಚೇಂಜರ್’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿತ್ತು, ಆದರೆ ಭಾನುವಾರ ಬಿಡುಗಡೆ ಆದ ‘ಢಾಕೂ ಮಹಾರಾಜ್’ ಸಿನಿಮಾದಿಂದಾಗಿ ‘ಗೇಮ್ ಚೇಂಜರ್’ ಹೊಡೆತ ತಿಂದಿದೆ. ಈ ಮೂಲಕ ಮೊದಲ ದಿನ ‘ಢಾಕೂ ಮಹಾರಾಜ್’ ಭರ್ಜರಿ ಕಲೆಕ್ಷನ್ ಮಾಡಿದೆ.
‘ಢಾಕೂ ಮಹಾರಾಜ್’ ಕೇವಲ ತೆಲುಗು ಭಾಷೆಗಳಲ್ಲಿ ಮಾತ್ರವೇ ಬಿಡುಗಡೆ ಆಗಿದೆ. ಹಾಗಿದ್ದರೂ ಸಹ ಸಿನಿಮಾ ಮೊದಲ ದಿನ ಬಹಳ ಒಳ್ಳೆಯ ಕಲೆಕ್ಷನ್ ಮಾಡಿದೆ. ಕೇವಲ ತೆಲುಗು ಭಾಷೆಗಳಲ್ಲಿ ಮಾತ್ರವೇ ಬಿಡುಗಡೆ ಆಗಿದ್ದರೂ ಸಹ ಮೊದಲ ದಿನ 22 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ.
‘ಢಾಕೂ ಮಹಾರಾಜ್’ ಸಿನಿಮಾ ಬಗ್ಗೆ ಧನಾತ್ಮಕ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದ್ದು, ಎರಡನೇ ದಿನವೂ ಸಿನಿಮಾ ಒಳ್ಳೆಯ ಗಳಿಕೆ ಮಾಡುವ ನಿರೀಕ್ಷೆ ಹುಟ್ಟಿಸಿದೆ. ಮಾತ್ರವಲ್ಲದೆ ‘ಗೇಮ್ ಚೇಂಜರ್’ ಮತ್ತು ‘ಢಾಕೂ ಮಹಾರಾಜ್’ ಸಿನಿಮಾವನ್ನು ಪ್ರೇಕ್ಷಕರು ಹೋಲಿಸಿ ನೋಡುತ್ತಿದ್ದು, ‘ಗೇಮ್ ಚೇಂಜರ್’ಗಿಂತಲೂ ‘ಢಾಕೂ ಮಹಾರಾಜ್’ ಒಳ್ಳೆಯ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.