newsics.com
ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರು ಅಪಘಾತವಾದ ಸ್ಥಳದಲ್ಲಿ ವಾಮಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಅಪಘಾತ ಸ್ಥಳದ ಬಳಿ ಮಡಿಕೆ, ನಿಂಬೆಹಣ್ಣು, ದಾರದ ಉಂಡಿಯಂತಹ ವಸ್ತುಗಳು ಪತ್ತೆಯಾಗಿವೆ. ಅಪಘಾತಕ್ಕೂ ವಾಮಾಚಾರಕ್ಕೂ ಲಿಂಕ್ ಇದ್ಯಾ ಎನ್ನುವ ಅನುಮಾನ ಬಂದಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ಅಪಘಾತ ನಡೆದಿದೆ. ಅಪಘಾತ ನಡೆದ 50 ಅಡಿಯಲ್ಲಿ ಈ ವಾಮಾಚಾರ ನಡೆದಿದೆ.
ಸಂಕ್ರಾಂತಿ ದಾಟುವ ವರೆಗೂ ಎಚ್ಚರವಾಗಿರಿ ಎಂದು ಕೆಲ ಜ್ಯೋತಿಷಿಗಳು ಹೇಳಿದ್ದರು. ಸಂಕ್ರಾಂತಿ ದಾಟುವವರೆಗೆ ಮನೆಯಲ್ಲಿ ಏನಾದರೂ ದುರ್ಘಟನೆ ಆಗುವ ಅಪಾಯವಿದೆ ಎಂದು ಎಚ್ಚರಿಸಿದ್ದರು’ ಎಂದು ಎಂ ಎಲ್ ಸಿ ಚನ್ನರಾಜ್ ಹಟ್ಟಿಹೊಳಿ ಹೇಳಿದ್ದಾರೆ
ಲಕ್ಕಿ ನಂಬರ್ ಕಾರು ಪಡೆದಿದ್ದ ಲಕ್ಷ್ಮೀ: ಇತ್ತೀಚೆಗಷ್ಟೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ವವರಿಗೆ ಹೊಸ ಸರ್ಕಾರಿ ಕಾರು ಹಂಚಿಕೆಯಾಗಿತ್ತು. ಕಪ್ಪು ಬಣ್ಣದ ಟೊಯೋಟಾ ಇನೋವಾ ಹೈಕ್ರಾಸ್ ಕಾರು ತಮಗೆ ಬೇಕು ಎಂದು ಅವರು ಅಲಾಟ್ ಮಾಡಿಸಿಕೊಂಡಿದ್ದರು. ಅದರೊಂದಿಗೆ ಕೆಎ 01 ಜಿಎ 9777 ಸಂಖ್ಯೆಯ ನಂಬರ್ ಪ್ಲೇಟ್ ಕೂಡ ಪಡೆದಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಸೇರಿದ ಎಲ್ಲಾ ಕಾರುಗಳು ಕಪ್ಪು ಬಣ್ಣದ್ದು ಹಾಗೂ 9777 ಸಂಖ್ಯೆಯ ಕಾರುಗಳಾಗಿವೆ. ವಿಜಯದಶಮಿಯಂದು ಬೆಂಗಳೂರಲ್ಲಿ ಕಾರಿಗೆ ಪೂಜೆ ಮಾಡಿಸಿದ್ದರು. ಸರ್ಕಾರಿ ಕಾರು ಚಾಲಕ ಶಿವು ಜೊತೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಪೂಜೆ ಮಾಡಿಸಿದ್ದರು.