newsics.com
ಚೈತ್ರಾ ಕುಂದಾಪುರ ಈಗ ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಮನೆಯಿಂದ ಹೊರಗಡೆ ಬಂದಿದ್ದಾರೆ. ಇನ್ನೇನು ಫಿನಾಲೆಗೆ ಎರಡು ವಾರ ಇರುವಾಗಲೇ ಚೈತ್ರಾ ಕುಂದಾಪುರ ಅವರ ಬೀಳ್ಕೊಡುಗೆಯಾಗಿದೆ.
ಬಿಗ್ ಬಾಸ್ ಮನೆಯ ಅನುಭವ ಹಂಚಿಕೊಂಡ ಚೈತ್ರಾ ಕುಂದಾಪುರ ಅವರು ನಾನು ಪತ್ರಕರ್ತಳಾಗಿ ಎಲ್ಲವನ್ನು ಅದೇ ಕನ್ನಡಕದಲ್ಲಿ ನೋಡ್ತಿದ್ದೆ ಎಂದ್ರು.
ಬಿಗ್ ಬಾಸ್ ಕಾರ್ಯಕ್ರಮವನ್ನು ಕೂಡ ಅನುಮಾನದ ದೃಷ್ಟಿಯಿಂದಲೇ ನೋಡ್ತಿದ್ದೆ. ಟಿಆರ್ಪಿಗಾಗಿ ಮಾಡ್ತಾರೆ. ಇದೊಂದು ಸ್ಕ್ರಿಪ್ಟೆಡ್ ಶೋ ಎಂದುಕೊಂಡಿದ್ದೆ. ಆದ್ರೆ ನಾನು ಅಂದುಕೊಂಡಿದ್ದು ಸುಳ್ಳು ಅಂತ ಒಳಗೆ ಹೋದ್ಮೇಲೆ ಗೊತ್ತಾಯ್ತು ಎಂದು ಚೈತ್ರಾ ಕುಂದಾಪುರ ಹೇಳಿದ್ರು
ಹುಡುಗರಿಗೆ ಶೇಕ್ ಹ್ಯಾಂಡ್ ಕೊಡೋದು ಕೂಡ ತಪ್ಪು ಎನ್ನುವಂತಹ ವಾತಾವರಣದಲ್ಲಿ ಬೆಳೆದ ನಾನು, ಇಲ್ಲಿಗೆ ಬಂದ್ಮೇಲೆ ಎಲ್ಲರ ಜೊತೆ ಬೆರತು ಆಟವಾಡಿದೆ. ನನ್ನ ವಿವಾದ ಹಾಗೂ ಭಾಷಣಗಳನ್ನ ನೋಡಿದ್ದ ಜನ, ನಿಜವಾದ ಚೈತ್ರಳ ನಗು-ಅಳುವನ್ನು ಇಲ್ಲಿ ನೋಡಿದ್ರು. ನಿಜಕ್ಕೂ ನಾನು ಇಲ್ಲಿ ಜೀವಿಸಿದೆ ಎಂದ ಚೈತ್ರಾ ಕುಂದಾಪುರ, ತನ್ನ ಬಿಗ್ ಬಾಸ್ ಜರ್ನಿ ಬಗ್ಗೆ ಕಿಚ್ಚನ ಮುಂದೆ ಮನಬಿಚ್ಚಿ ಮಾತಾಡಿದ್ರು
ಚೈತ್ರಾ ಕುಂದಾಪುರ ಅವರು ಮಾತಿನಿಂದಲೇ ಗುರುತಿಸಿಕೊಂಡವರು. ಈ ಮಾತೇ ಅವರಿಗೆ ವರ ಆಗಿದ್ದೂ ಉಂಟು, ಶಾಪವೂ ಆಗಿದ್ದೂ ಇದೆ. ದೊಡ್ಮನೆಯಲ್ಲಿ ಚೈತ್ರಾ ಕುಂದಾಪುರ ಅವರು ಅಗತ್ಯಕ್ಕಿಂತ ಜಾಸ್ತಿ ಮಾತನಾಡಿದ್ದು ಮನೆಯವರಿಗೆ ಕಿರಿಕಿರಿ ತಂದಿದ್ದೂ ಇದೆ. ಇದನ್ನೇ ಅಲ್ಲಿನ ಸ್ಪರ್ಧಿಗಳು ಹೇಳಿಕೊಂಡಿದ್ದರು. ಅಂದಹಾಗೆ ಈ ವಿಚಾತವಾಗಿ ಕಿಚ್ಚ ಸುದೀಪ್ ಕೂಡ ಚೈತ್ರಾ ಕಾಲೆಳೆದಿದ್ದರು. ಕೊನೆಯದಾಗಿ ಚೈತ್ರಾ ಕುಂದಾಪುರ ಅವರು ಕಿಚ್ಚ ಸುದೀಪ್‌ಗೆ ಕ್ಷಮೆ ಕೇಳಿದ್ದಾರೆ.