newsics.com
ಬೆಂಗಳೂರು : ಬೆಂಗಳೂರು ಟ್ರಾಫಿಕ್ ಜಾಮ್ ಸಮಸ್ಯೆಯ ಬಗ್ಗೆ ಹೊಸದಾಗಿ ವಿವರಿಸಿ ಹೇಳುವ ಅವಶ್ಯಕತೆ ಇಲ್ಲ. ಬೆಂಗಳೂರಲ್ಲಿ ವರ್ಷದಿಂದ ವರ್ಷಕ್ಕೆ ಟ್ರಾಫಿಕ್ ಜಾಮ್ ಜಾಸ್ತಿ ಆಗುತ್ತಲ್ಲೇ ಇದ್ದು, ಇದೀಗ ಬೆಂಗಳೂರು ಟ್ರಾಫಿಕ್ ಜಾಮ್ ವಿಚಾರದಲ್ಲಿ ಮತ್ತೊಂದು ಕುಖ್ಯಾತಿಯನ್ನು ಗಳಿಸಿದೆ.
ವಿಶ್ವದ ಪ್ರಮುಖ ನಗರಗಳ ಟ್ರಾಫಿಕ್ ದಟ್ಟಣೆ ಬಗ್ಗೆ ಅಧ್ಯಯನ ನಡೆಸಿದ್ದ ಟಾಮ್ ಟಾಮ್ ಸಂಸ್ಥೆ, ಭಾರತದ ಮೂರು ನಗರಗಳಲ್ಲಿ ಅತಿಹೆಚ್ಚು ಟ್ರಾಫಿಕ್ ಇರುವುದಾಗಿ ವರದಿ ರಿಲೀಸ್ ಮಾಡಿದೆ.
ಟಾಮ್ ಟಾಮ್ ವರದಿಯಲ್ಲಿ ಕಲ್ಕತ್ತಾ, ಪುಣೆ ಹಾಗೂ ಬೆಂಗಳೂರು ಅತಿಹೆಚ್ಚು ಸಂಚಾರ ದಟ್ಟಣೆ ಹೊಂದಿರುವುದಾಗಿ ವರದಿಯಿಂದ ತಿಳಿದುಬಂದಿದೆ.
ಇತ್ತ ರಾಜಧಾನಿಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರೀ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗಿರುವ ವರದಿ ಬಹಿರಂಗವಾಗಿದ್ದು, ಬೆಂಗಳೂರಿನಲ್ಲಿ 10 ಕಿಲೋಮೀಟರ್ ದೂರ ತಲುಪೋಕೆ 34 ನಿಮಿಷ 10 ಸೆಕೆಂಡ್ ಸಮಯ ಬೇಕಿದೆ ಎಂದು ವರದಿ ತಿಳಿಸಿದೆ. ಅಲ್ಲದೇ ರಾಜಧಾನಿಯ ಜನರು ವರ್ಷದಲ್ಲಿ ಐದು ದಿನಗಳಷ್ಟು ಸಮಯವನ್ನ ಟ್ರಾಫಿಕ್ ನಲ್ಲೇ ಕಳೆಯುತ್ತಿರುವುದು ವರದಿ ಹೇಳಿದೆ