newsics.com
ಬೆಂಗಳೂರು : ನಮ್ಮ ಮೆಟ್ರೋ ಬಹುನಿರೀಕ್ಷಿತ ಹಳದಿ ಮಾರ್ಗದಲ್ಲಿ ಸಂಚಾರ ಮಾಡಲಿರುವ ರೈಲು ಕೊಲ್ಕತ್ತಾದ ಟಿಟಾಘರ್ನಿಂದ ಬೆಂಗಳೂರಿನತ್ತ ಹೊರಟಿದೆ.
ಆರ್ವಿ ರೋಡ್ ಟು ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಈ ರೈಲು ಸಂಚಾರ ಮಾಡಲಿದೆ. ಕೊಲ್ಕತ್ತಾದ ಟಿಟಾಘರ್ನಲ್ಲಿ ಆತ್ಮ ನಿರ್ಭರ ಭಾರತದ ಅಡಿಯಲ್ಲಿ ತಯಾರಿಸಲಾಗಿದೆ.
ಹಳದಿ ಮಾರ್ಗಕ್ಕೆ ರೈಲು ಸೆಟ್ ಪೂರೈಕೆಗೆ ಬಿಎಂಆರ್‌ಸಿಎಲ್ ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಗ್ರೀನ್ ಸಿಗ್ನಲ್ ನೀಡಿದ್ದಾರೆ
ಇನ್ನು 15 ದಿನದಲ್ಲಿ ಬೆಂಗಳೂರಿನ ಹೆಬ್ಬಗೋಡಿ ಡ್ರೈವರ್ ಲೆಸ್ ರೈಲು ತಲುಪಲಿದೆ. ಆ ಮೂಲಕ ಹಳದಿ ಮಾರ್ಗದ ಉದ್ಘಾಟನೆಗೆ ಕಾಯುತ್ತಿದ್ದವರಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್ ನೀಡಿದೆ