newsics.com
ಬೆಂಗಳೂರು : ನಟಿ ಮಿಲನಾ ನಾಗರಾಜ್ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮಗಳ ಜೊತೆಗಿನ ಮುದ್ದಾದ ವಿಡಿಯೋವೊಂದನ್ನು ನಟಿ ಶೇರ್ ಮಾಡಿದ್ದಾರೆ.
ನಿನ್ನ ನಗುವಿನಿಂದ ನಮ್ಮ ಜಗತ್ತು ಬೆಳಗುತ್ತಿದೆ ಎಂದು ನಟಿ ಅಡಿಬರಹ ನೀಡಿದ್ದಾರೆ.ಮಿಲನಾ ಮಗಳ ತುಂಟಾಟ ನೋಡಿ ಫ್ಯಾನ್ಸ್ ಕ್ಯೂಟ್ ಎಂದಿದ್ದಾರೆ.
ಕಳೆದ ಸೆ.5ರಂದು ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳಿಗೆ ಡಾರ್ಲಿಂಗ್ ಕೃಷ್ಣ ಗ್ರ್ಯಾಂಡ್ ಆಗಿ ಸ್ವಾಗತಿಸಿದ್ದರು. ಮಗಳಿಗೆ ಪರಿ ಎಂದು ಮಿಲನಾ ದಂಪತಿ ಹೆಸರಿಟ್ಟಿದ್ದಾರೆ.
https://www.instagram.com/reel/DEcGM9kPKUG/?igsh=dTBzdGpxMXFpYWh2