newsics.com
ಬೆಂಗಳೂರು :
ನಟಿ ಹರಿಪ್ರಿಯಾ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಗರ್ಭಿಣಿ ಹಾಗೇ ಹಾಣಿಸಿಕೊಂಡಿದ್ದರು.
ಮಾಲ್ಡೀವ್ಸ್ನಲ್ಲಿ ವಿಶೇಷ ಫೋಟೋಶೂಟ್ ಮಾಡಿಸಿರುವ ಸಿಂಹಪ್ರಿಯಾ ದಂಪತಿ, ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಬಹಿರಂಗಪಡಿಸಿದ್ದರು.
ಅಲ್ಲದೇ ಫೋಟೋಗಳಲ್ಲಿ ಹರಿಪ್ರಿಯಾ ಬೇಬಿ ಬಂಪ್ ಲುಕ್ನಲ್ಲಿ ಕಾಣಿಸಿಕೊಂಡಿದ್ದರು.
ಹೊಸ ವರ್ಷದ ಖುಷಿಯಲ್ಲಿರೋ ಸ್ಟಾರ್ ದಂಪತಿ ನೀಲಿ ಬಣ್ಣದ ಕಾಸ್ಟ್ಯೂಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು ಯಾವುದೇ ದೃಷ್ಟಿಯಾಗದಿರಲಿ, ಸೂಪರ್ ಬೇಬಿ ಶೂಟ್ ಅಂತ ಕಾಮೆಂಟ್ಸ್ ಹಾಕಿದ್ದಾರೆ.