newsics.com
ಮುಂಬೈ : ಸ್ಟಾರ್ RJ ಮತ್ತು ಸೋಷಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್ ಸಿಮ್ರಾನ್ ಸಿಂಗ್ ಇನ್ನಿಲ್ಲ.
ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ ಗುರುಗ್ರಾಮ್ ಸೆಕ್ಟರ್ 47 ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಫೇಮಸ್ ಆಗಿದ್ದ, ಸುಮಾರು ಏಳು ಲಕ್ಷ ಅನುಯಾಯಿಗಳನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರದ ಅತ್ಯಂತ ಜನಪ್ರಿಯ ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ ಗುರುಗ್ರಾಮ್‌ನಲ್ಲಿ ಮೃತರಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಮ್ರಾನ್ ಸಿಂಗ್ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.