newsics.com
ಎಲ್ಲರೂ ಮನೆಯನ್ನ ಸ್ವಚ್ಛವಾಗಿ ಇಟ್ಕೊಳ್ತಾರೆ. ಆದ್ರೆ ಮನೆ ಜೊತೆಗೆ ಬಾತ್‌ರೂಮ್ ಕೂಡ ಕ್ಲೀನ್ ಆಗಿರಬೇಕು. ಹೌದು, ಹಲವರು ಬಾತ್‌ರೂಮ್ ವಾರಕ್ಕೆ ಎರಡು ಮೂರು ಸಲ ತೊಳೆಯುತ್ತಾರೆ. ಆದ್ರೆ ಬಕೆಟ್, ಮಗ್‌ನ ಕ್ಲೀನ್ ಮಾಡಲ್ಲ. ಹೀಗಾಗಿ ಬಕೆಟ್, ಮಗ್ ಕೊಳೆಯಾಗುತ್ತೆ.
ಕೊಳೆಯಾದ ಬಾತ್ರೂಮ್ ಬಕೆಟ್, ಮಗ್‌ನ ಮನೆಯಲ್ಲಿರೋ ಎರಡೇ ವಸ್ತುಗಳಿಂದ ಸುಲಭವಾಗಿ ಕ್ಲೀನ್ ಮಾಡಬಹುದು. ಹೊಸದರಂತೆ ಹೊಳೆಯುವಂತೆ ಮಾಡಬಹುದು. ಈ ಎರಡೇ ವಸ್ತುಗಳಿಂದ ಪಳಪಳ ಹೊಳೆಯುವಂತೆ ಮಾಡಬಹುದು.
ಮೊದಲನೆಯದು ಬೇಕಿಂಗ್ ಸೋಡಾ. ಈ ಸೋಡಾದಿಂದ ಯಾವ ಕೊಳೆಯನ್ನಾದ್ರೂ ಸುಲಭವಾಗಿ ತೆಗೆಯಬಹುದು. ಮೊದಲು ಒಂದು ಬಟ್ಟಲಲ್ಲಿ ಬೇಕಿಂಗ್ ಸೋಡಾ ತಗೊಂಡು ಅದಕ್ಕೆ ನಿಂಬೆರಸ, ಡಿಶ್ ವಾಶ್ ಹಾಕಿ ಮಿಕ್ಸ್ ಮಾಡಿ.ಈಗ ಹಳೆಯ ಟೂತ್ ಬ್ರಷ್‌ನಿಂದ ಈ ಮಿಶ್ರಣವನ್ನ ಬಕೆಟ್, ಮಗ್‌ಗೆ ಉಜ್ಜಿ. 15 ನಿಮಿಷ ಬಿಟ್ಟು ಮತ್ತೆ ಉಜ್ಜಿ ತೊಳೆಯಿರಿ. ತಣ್ಣೀರು ಅಥವಾ ಬಿಸಿನೀರು ಉಪಯೋಗಿಸಬಹುದು.
ವಿನೆಗರ್ ಮೊಂಡು ಕಲೆಗಳನ್ನ ತೆಗೆಯೋದ್ರಲ್ಲಿ ತುಂಬಾ ಎಫೆಕ್ಟಿವ್. ಬೇಕಿಂಗ್ ಸೋಡಾ ಜೊತೆ ವಿನೆಗರ್ ಕೂಡ ಉಪಯೋಗಿಸಬಹುದು. ಒಂದು ಬಟ್ಟಲಲ್ಲಿ ಸ್ವಲ್ಪ ಬೇಕಿಂಗ್ ಸೋಡಾ ತಗೊಂಡು ಅದಕ್ಕೆ ಎರಡು ಚಮಚ ವಿನೆಗರ್ ಹಾಕಿ ಮಿಕ್ಸ್ ಮಾಡಿ. ಇದನ್ನ ಟೂತ್ ಬ್ರಷ್‌ನಿಂದ ಬಕೆಟ್, ಮಗ್‌ಗೆ ಹಚ್ಚಿ. 10 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ. ಈಗ ಬಕೆಟ್, ಮಗ್ ಹೊಸದರಂತೆ ಕಾಣುತ್ತೆ