newsics.com
ಮುಂಬೈ: ಭಾರತದ ಮೊದಲ ಫ್ಲೈಓವರ್ ಸೃಷ್ಟಿಕರ್ತ ಸಿವಿಲ್ ಇಂಜಿನಿಯರ್ ಶಿರೀಷ್ ಪಟೇಲ್(92) ನಿಧನರಾದರು.
ಶಿರೀಷ್ ಪಟೇಲ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರೊಯಾಗದೆ ಶುಕ್ರವಾರ ಮುಂಬೈನಲ್ಲಿ ನಿಧನರಾದರು.
ದೇಶದ ಪ್ರಪ್ರಥಮ ಫ್ಲೈಓವರ್ ಎಂದೆನಿಸಿರುವ ಮುಂಬೈನ ಕೆಂಪ್ಸ್ ಕಾರ್ನರ್ ಫ್ಲೈಓವರ್‌ನ ನಿರ್ಮಾಣದ ಮೇಲುಸ್ತುವಾರಿಯನ್ನು ಶಿರೀಷ್ ಪಟೇಲ್ ವಹಿಸಿದ್ದರು.
1932ರ ಮಾ. 7ರಂದು ಜನಿಸಿದ್ದ ಅವರು, ಡಿ.20ರಂದು ಕೊನೆಯುಸಿರೆಳೆದರು. ಸಿವಿಲ್ ಇಂಜಿನಿಯರ್ ಆಗಿ ದೇಶದ ಅನೇಕ ಬಹುಮುಖ್ಯ ಕಟ್ಟಡಗಳ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 1965ರಲ್ಲಿ ಮುಂಬೈನಲ್ಲಿ ದೇಶದಲ್ಲೇ ಮೊದಲ ಫ್ಲೈಓವರ್ ಕಟ್ಟುವ ಕೆಲಸ ಆರಂಭವಾದಾಗ ಆ ಜವಾಬ್ದಾರಿಯನ್ನು ಮಹಾರಾಷ್ಟ್ರ ಸರ್ಕಾರ ಇವರ ಹೆಗಲಿಗೆ ಹಾಕಿತ್ತು.
Health Tips ನಿಮ್ಮ ಕೂದಲು ಸಿಕ್ಕಾಪಟ್ಟೆ ಉದುರುತ್ತಿದೆಯಾ? ಈ ರೀತಿ ಟ್ರೈ ಮಾಡಿ
Personality Test ನಿಮ್ಮ ಫೇಸ್ ಹೀಗಿದ್ಯಾ? ಇಂತಹ ಮುಖ ಬಿಚ್ಚಿಡತ್ತೆ ನಿಮ್ಮ ವ್ಯಕ್ತಿತ್ವ!
Bangalore accident ಬೆಂಗಳೂರು ಬಳಿ ಭೀಕರ ಸರಣಿ ಅಪಘಾತ: ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಆರು ಮಂದಿ ಸಾವು