newsics.com
ನವದೆಹಲಿ : ಇಲ್ಲೊಬ್ಬ ವ್ಯಕ್ತಿ ತನ್ನ ಮುಂಭಾಗದ ಹಲ್ಲುಗಳನ್ನೆಲ್ಲ ಕೀಳಿಸಿ ಚಿನ್ನದ ಹಲ್ಲುಗಳನ್ನು ಅಳವಡಿಸಿಕೊಳ್ಳುವ ಮೂಲಕ ಗೋಲ್ಡನ್ ಸ್ಮೈಲ್ ಬೀರಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಚಿನ್ನದ ಹಲ್ಲಿನ ವ್ಯಕ್ತಿಯನ್ನು ರಾಜನ್ ಚೌಧರಿ ಎಂದು ಗುರುತಿಸಲಾಗಿದೆ. ಈತ ನೈಸರ್ಗಿಕವಾದ ಹಲ್ಲುಗಳನ್ನು ಕೀಳಿಸಿಕೊಂಡು ಚಿನ್ನದ ಹಲ್ಲು ಅಳವಡಿಸಿಕೊಂಡಿದ್ದಾನೆ. ಹಲ್ಲುಗಳ ಮೇಲೆ ರಾಜನ್ ಎಂದು ಬರೆಯಿಸಿಕೊಂಡಿದ್ದಾನೆ. ಚಿನ್ನದ ಹಲ್ಲುಗಳ ಮೇಲೆ ತಮ್ಮ ಹೆಸರು ಬರೆಸಿಕೊಂಡ ಮೊದಲ ಭಾರತೀಯ ವ್ಯಕ್ತಿ ರಾಜನ್ ಚೌಧರಿ ಎನ್ನಲಾಗುತ್ತಿದೆ.
https://www.instagram.com/reel/C_0h8zuAElD/?utm_source=ig_web_copy_
ಚಿನ್ನದ ಹಲ್ಲುಗಳು, ಹಲ್ಲು ಕಿತ್ತ ಜಾಗದಲ್ಲಿ ಮೃದುವಾದ ಅಥವಾ ಗಟ್ಟಿಯಾದ ರಚನೆಯ ಒಂದು ಭಾಗವಾಗಿದ್ದು, ಹಲ್ಲಿನ ಗೋಚರಿಸುವ ಭಾಗವನ್ನು ಚಿನ್ನದಿಂದ ಅಚ್ಚು ಮಾಡಿದ ರಚನೆಯನ್ನು ಕೂರಿಸಲಾಗಿದೆ. ಈತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.