newsics.com
ಬೆಂಗಳೂರು : ಡ್ರೋನ್ ಪ್ರತಾಪ್ ಸೈನ್ಸ್ ವಿಡಿಯೋ ಹೆಸರಿನಲ್ಲಿ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಿರ್ಜನ ಪ್ರದರ್ಶನದಲ್ಲಿದ್ದ ಕೃಷಿ ಹೊಂಡದಂತ ಆಳವಾದ ಗುಂಡಿಯಲ್ಲಿನ ನೀರಿಗೆ ಡ್ರೋನ್ ಪ್ರತಾಪ್ ಸೋಡಿಯಂ ಮೆಟಲ್ ಹಾಕಿದ್ದಾರೆ. ನೀರಿಗೆ ಸೋಡಿಯಂ ಮೆಟಲ್ ಹಾಕುತ್ತಿದ್ದಂತೆ ಅದು ತಕ್ಷಣ ದೊಡ್ಡ ಮಟ್ಟದಲ್ಲಿ ಸ್ಫೋಟಗೊಂಡಿದ್ದು ಶಬ್ಧ ಕೂಡ ಅಷ್ಟೇ ಪ್ರಮಾಣದಲ್ಲಿ ಕೇಳಿಸಿದೆ.
ಲೈವ್ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಹರಿಬಿಟ್ಟಿದ್ದಾರೆ. ಸದ್ಯ ಇದೀಗ ಈ ವಿಡಿಯೋಗೆ ಪರಿಸರ ಪ್ರೇಮಿಗಳಿಂದ ವಿರೋಧ ವ್ಯಕ್ತವಾಗಿದೆ.