Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Child Sold ಗಂಡನ ಕಷ್ಟ ನೋಡಿ ಮಗು‌ ಮಾರಿದ ತಾಯಿ! ಒಂದೂವರೆ‌ ಲಕ್ಷ ರೂ.ಗಳಿಗೆ ಮಾರಾಟ, ನಾಲ್ವರ ಬಂಧ‌ನ
ಕರ್ನಾಟಕಪ್ರಮುಖ

Child Sold ಗಂಡನ ಕಷ್ಟ ನೋಡಿ ಮಗು‌ ಮಾರಿದ ತಾಯಿ! ಒಂದೂವರೆ‌ ಲಕ್ಷ ರೂ.ಗಳಿಗೆ ಮಾರಾಟ, ನಾಲ್ವರ ಬಂಧ‌ನ

Share
2 Min Read
SHARE

newsics.com

ರಾಮನಗರ: ಗಂಡನ ಕಷ್ಟಕ್ಕೆ ನೆರವಾಗಲು ಇಲ್ಲಿನ ಯಾರಬ್‌ ನಗರದ ಮಹಿಳೆಯೊಬ್ಬರು ತನ್ನ ಒಂದು ತಿಂಗಳ ಗಂಡು ಮಗುವನ್ನು ಬೆಂಗಳೂರಿನ ಮಹಿಳೆಯೊಬ್ಬರಿಗೆ 1.50 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದಾರೆ.

ರಾಮನಗರ ಪುರ ಠಾಣೆಗೆ ಮಹಿಳೆಯ ಪತಿ ಸದ್ದಾಂ ಪಾಷಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನ ಪತ್ನಿ ಹಾಗೂ ಮಧ್ಯಸ್ಥಿಕೆ ವಹಿಸಿದ ಮೂವರನ್ನು ಬಂಧಿಸಿದ್ದಾರೆ.

ಮಾರಾಟ ಮಾಡಲಾಗಿದ್ದ ಒಂದು ತಿಂಗಳ ಹಸುಗೂಸು ಮೊಹಮ್ಮದ್ ಅಲಿ ಬೇಗ್‌ನನ್ನು ಪೊಲೀಸರು ವಶಕ್ಕೆ ಪಡೆದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಒಪ್ಪಿಸಿದ್ದಾರೆ.

ಮಗುವಿನ ತಾಯಿ ನಸ್ರೀನ್ ತಾಜ್, ಮಾರಾಟಕ್ಕೆ ಮಧ್ಯಸ್ಥಿಕೆ ವಹಿಸಿದ್ದ ಅಸ್ಲಂ, ಬೆಂಗಳೂರಿನ ತಾರನಂ ಸುಲ್ತಾನ ಹಾಗೂ ಮಗು ಖರೀದಿಸಿದ ಶಾಜಿಯಾ ಬಾನು ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಸ್ಥಿಕೆ ವಹಿಸಿದ್ದ ಮತೋರ್ವ ಆರೋಪಿ ಫೂಲ್‌ಬಾಗ್‌ನ ಫಾಹಿಮಾ ತಲೆಮರೆಸಿಕೊಂಡಿದ್ದಾಳೆ.

ಮಗುವಿನ ತಂದೆ ಸದ್ದಾಂ ಪಾಷಾ ಆರು ವರ್ಷದ ಹಿಂದೆ ಜಿಯಾವುಲ್ಲಾ ಬ್ಲಾಕ್‌ನ ನಸ್ರೀನ್ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಐದು ವರ್ಷದ ಪುತ್ರಿ ಹಾಗೂ ಮೂವರು ಪುತ್ರರಿದ್ದಾರೆ. ಈ ಪೈಕಿ, ಮೊಹಮ್ಮದ್ ತಿಂಗಳ ಹಿಂದೆ ಜನಿಸಿದ್ದ. ಫಿಲೇಚರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಸದ್ದಾಂ ಕಡು ಬಡವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಕುಟುಂಬ ನಿರ್ವಹಣೆಗೆ ಪತಿ ಎದುರಿಸುತ್ತಿದ್ದ ಕಷ್ಟ ನೋಡಿ ಮರುಗುತ್ತಿದ್ದ ನಸ್ರೀನ್, ನೀವು ಒಬ್ಬರೇ ಕೆಲಸ ಮಾಡಿ ನಾಲ್ಕು ಮಕ್ಕಳನ್ನು ಸಾಕಿ ಅವರಿಗೆ ವಿದ್ಯಾಭ್ಯಾಸ ಕೊಡಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಒಂದು ಮಗುವನ್ನು ಮಾರಾಟ ಮಾಡಿ ನಮ್ಮ ಕಷ್ಟಗಳನ್ನು ತೀರಿಸಿಕೊಳ್ಳೋಣ ಎಂದು ಪತಿಗೆ ಒತ್ತಾಯಿಸುತ್ತಿದ್ದಳು. ಅದಕ್ಕೆ ಒಪ್ಪದ ಸದ್ದಾಂ, ಏನೇ ಕಷ್ಟ ಬಂದರೂ ಮಗು ಮಾರುವುದು ಬೇಡ. ನಾವೇ ನೋಡಿಕೊಳ್ಳೋಣ ಎಂದು ಹೇಳಿದ್ದರು.

ಸದ್ದಾಂ ಅವರು ಡಿ.5ರಂದು ಬೆಳಗ್ಗೆ ಕೆಲಸಕ್ಕೆ ಹೋಗಿ ರಾತ್ರಿ 8ಕ್ಕೆ ಮನೆಗೆ ವಾಪಸ್‌ ಆದಾಗ ಮಗು ಕಾಣಲಿಲ್ಲ. ಈ ಕುರಿತು ಪತ್ನಿಯನ್ನು ಪ್ರಶ್ನಿಸಿದಾಗ, ಹುಷಾರಿಲ್ಲದ ಕಾರಣ ಸಂಬಂಧಿಕರ ಮನೆಗೆ ಕಳಿಸಿದ್ದೇನೆ ಎಂದಿದ್ದಳು.

ಅನುಮಾನಗೊಂಡ ಸದ್ದಾಂ ಮತ್ತಷ್ಟು ವಿಚಾರಣೆ ನಡೆಸಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಆಗ ಪತ್ನಿ ತಳ್ಳಿದ್ದರಿಂದ ಸದ್ದಾಂ ತಲೆಗೆ ಪೆಟ್ಟಾಗಿತ್ತು ಎಂದು ಪೊಲೀಸರು ಹೇಳಿದರು.

ಮಾರನೆಯ ದಿನ ಬೆಳಗ್ಗೆ ಮತ್ತೆ ಮಗು ಕುರಿತು ಪತ್ನಿಯನ್ನು ವಿಚಾರಿಸಿದಾಗ, ಮಗುವನ್ನು ಇಂದು ಅಥವಾ ನಾಳೆ ಸಂಜೆ ಕರೆದುಕೊಂಡು ಬರುತ್ತಾರೆ ಎಂದು ಹೇಳಿದ್ದಳು. ಡಿ. 7ರಂದು ಬೆಳಗ್ಗೆ ಮಗುವಿನೊಂದಿಗೆ ಅಸ್ಲಂ, ತಾರನಂ ಸುಲ್ತಾನ್ ಹಾಗೂ ಶಾಜಿಯಾ ಅವರು ಮನೆಗೆ ಬಂದರು. ಆಗ ಮಗು ಕುರಿತು ಸದ್ದಾಂ ಅವರು ಅಸ್ಲಾಂನನ್ನು ವಿಚಾರಿಸಿದಾಗ, ತಾರನಂ ಸಂಬಂಧಿ ಶಾಜಿಯಾ ಅವರಿಗೆ 1.50 ಲಕ್ಷ ರೂ.ಗಳಿಗೆ ಮಗು ಮಾರಾಟ ಮಾಡಿರುವ ವಿಷಯ ಗೊತ್ತಾಯಿತು.

ಇದರಿಂದ ದಿಗ್ಭ್ರಮೆಗೊಂಡ ಸದ್ದಾಂ, ಪತ್ನಿ ಸೇರಿದಂತೆ ಐವರ ವಿರುದ್ಧ ಠಾಣೆಗೆ ದೂರು ಕೊಟ್ಟರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಲೆಮರೆಸಿಕೊಂಡಿರುವ ಫಾಹಿಮಾ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

TAGGED:child Sold for one and a half lakh rupeesfour arrested
Share This Article
Facebook Twitter Copy Link Print
Previous Article Bus Accident ಬಸ್ ಬ್ರೇಕ್ ಫೇಲ್: ನಾಲ್ವರು‌ ಪಾದಚಾರಿಗಳ ಸಾವು, 25ಕ್ಕೂ ಹೆಚ್ಚು ಮಂದಿಗೆ ಗಾಯ
Next Article S M Krishna ಬೆಂಗಳೂರಲ್ಲಿ ಎಸ್.ಎಂ. ಕೃಷ್ಣ ಅಂತಿಮ ದರ್ಶನ ಇಂದು,‌ ನಾಳೆ ಹುಟ್ಟೂರಲ್ಲಿ ಅಂತ್ಯಕ್ರಿಯೆ

Popular Posts

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

You Might Also Like

ಕರ್ನಾಟಕಪ್ರಮುಖ

ಡಿಕೆ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

1 Min Read
ಕರ್ನಾಟಕಪ್ರಮುಖ

U.T. Khader ಸರ್ಕಾರಿ ಆಸ್ಪತ್ರೆಗೆ ಯು.ಟಿ ಖಾದರ್​ ಭೇಟಿ : ನೆಲದ ಮೇಲೆ ಕೂತ ಗರ್ಭಿಣಿ ಕಂಡು ಗರಂ

1 Min Read
ಕರ್ನಾಟಕಪ್ರಮುಖ

DK Shivakumar ಸಾರ್ವಜನಿಕರ ದೂರು ಆಲಿಸಲು ಪ್ರತ್ಯೇಕ ಸಚಿವಾಲಯ ಆರಂಭ : ದೇಶದಲ್ಲೇ ಮೊದಲು!

1 Min Read
ದೇಶಪ್ರಮುಖ

ಟಿಸಿಎಸ್‌ ಬಳಿಕ ವಿಪ್ರೋದಲ್ಲಿ ಮತಾಂತರ ಜಾಲ? ಮಾಜಿ ಉದ್ಯೋಗಿ ಹೇಳಿದ ಶಾಕಿಂಗ್‌ ರಹಸ್ಯವೇನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?