newsics.com
ಗಾಜಿಯಾಬಾದ್ : ಶೌಚಾಲಯದ ಪೈಪ್ ನಲ್ಲಿ 6 ತಿಂಗಳ ಭ್ರೂಣವೊಂದು ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಶೌಚಾಲಯದ ಪೈಪ್‌ನಲ್ಲಿ ನೀರು ನಿಂತಿರುವುದನ್ನು ಗಮನಿಸಿದ ಮನೆ ಮಾಲೀಕ ದೇವೇಂದ್ರ ಅಲಿಯಾಸ್ ದೇವ ಪೈಪ್ ಒಡೆದು ನೋಡಿದಾಗ ಅದರಲ್ಲಿ ಭ್ರೂಣ ಸಿಲುಕಿರುವುದು ಕಂಡು ಬಂದಿದೆ.
ಶೌಚಾಲಯದ ಪೈಪ್‌ನಲ್ಲಿ 6 ತಿಂಗಳ ಭ್ರೂಣ ಪತ್ತೆಯಾಗಿದ್ದು, ಈ ಬಗ್ಗೆ ಮಾಹಿತಿ ಪಡೆದ ಇಂದಿರಾಪುರಂ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ನೀರು ತುಂಬಿದ್ದರಿಂದ ಪೈಪ್ ಒಡೆದು ಭ್ರೂಣ ಹೊರಬಿದ್ದಿದೆ ಎಂದು ವಿಚಾರಣೆ ವೇಳೆ ಮಾಲೀಕರು ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಕೂಡಲೇ ಅಕ್ಕಪಕ್ಕದ ಜನರು ಕೂಡ ಸ್ಥಳದಲ್ಲಿ ಜಮಾಯಿಸಿದ್ದು, ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ.