newsics.com
ನವದೆಹಲಿ: ತೆಲಂಗಾಣದಿಂದ ಚುನಾಯಿತರಾಗಿರುವ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರಿಗೆ ನಿಗದಿಪಡಿಸಲಾದ ಸೀಟ್ ಸಂಖ್ಯೆ 222 ಅಡಿಯಲ್ಲಿ 500ರ ನೋಟುಗಳ ಬಂಡಲ್ ಪತ್ತೆಯಾದ ಅಚ್ಚರಿಯ ಘಟನೆ ಸಂಸತ್‌ನಲ್ಲಿ ನಡೆದಿದೆ.
ತೆಲಂಗಾಣದ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರ ರಾಜ್ಯಸಭೆಯ ಆಸನದಲ್ಲಿ 500 ನೋಟುಗಳ ಬಂಡಲ್ ಪತ್ತೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯಸಭೆಯಲ್ಲಿ ಕೋಲಾಹಲ ಉಂಟಾಯಿತು. ಮೂಲಗಳ ಪ್ರಕಾರ ಅದರಲ್ಲಿ 50 ಸಾವಿರ ರೂ. ಹಣವಿತ್ತು.
ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿದರೆ, ಇದು ಬಿಜೆಪಿಯ ಪಿತೂರಿ ಎಂದು ಪ್ರತಿಪಕ್ಷಗಳು ಹೇಳಿವೆ.
ತೆಲಂಗಾಣದಿಂದ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿರುವ ಅಭಿಷೇಕ್ ಮನುಸಿಂಘ್ವಿ ಅವರು ಕುಳಿತುಕೊಳ್ಳುವ ಸೀಟಿನಲ್ಲಿ ಹಣವಿತ್ತು ಎಂದು ಹೇಳಲಾಗಿದೆ. ಸಭಾಪತಿ ಧಂಖರ್ ಅವರ ಈ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಸಂಸದರು ಸದನದಲ್ಲಿ ಪ್ರತಿಭಟನೆ ನಡೆಸಿದರು. ತನಿಖೆಗೆ ಮುನ್ನ ಹೆಸರು ಹೇಳಬಾರದು ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.
ಅಭಿಷೇಕ್ ಮನು ಸಿಂಘ್ವಿ ಆರೋಪವನ್ನು ಅಲ್ಲಗಳೆದಿದ್ದಾರೆ. ರಾಜ್ಯಸಭೆಗೆ ಹೋದಾಗಲೆಲ್ಲ 500 ರೂಪಾಯಿ ನೋಟು ಹಿಡಿದು ಬರುತ್ತೇನೆ ಎಂದ ಅವರು, ಈ ಬಗ್ಗೆ ಕೇಳಿದ್ದು ಇದೇ ಮೊದಲು. ಮಧ್ಯಾಹ್ನ 12.57ಕ್ಕೆ ಸದನ ತಲುಪಿ 1 ಗಂಟೆಗೆ ಸದನದಿಂದ ಎದ್ದು ಹೋಗಿದ್ದೆ ಎಂದರು.