newsics.com
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದೇಶದ ಮೊದಲ ಶ್ವಾನ ತರಬೇತಿ ಕೇಂದ್ರ ಆರಂಭಗೊಂಡಿದೆ.
ಶ್ವಾನ ತರಬೇತಿ ಕೇಂದ್ರಕ್ಕೆ ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ ಮತ್ತು ರಮೇಶ್ ಕುಮಾರ್ ಚಾಲನೆ ನೀಡಿದರು.
ಕಳ್ಳಬೇಟೆ ಮತ್ತು ಅರಣ್ಯ ಪ್ರಕರಣ ಭೇದಿಸಲು ಸಹಕಾರಿಯಾಗುವಂತೆ ಶ್ವಾನ ಬಳಕೆ ಮಾಡಿಕೊಳ್ಳಲು ಮುಂದಾಗಿರುವ ಅರಣ್ಯ ಇಲಾಖೆ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದ್ದ ಬೆಲ್ಜಿಯಂ ಶೆಪರ್ಡ್ ಶ್ವಾನಗಳನ್ನು ಈಗ ಅರಣ್ಯ ಕಾವಲಿಗೂ ಬಳಸಿಕೊಳ್ಳಲು ನಿರ್ಧರಿಸಿದೆ.
ಚಾಕಚಕ್ಯತೆಗೆ ಹೆಸರುವಾಸಿಯಾಗಿರುವ ಬೆಲ್ಜಿಯಂ ಶೆಪರ್ಡ್ ಶ್ವಾನವು ಅರಣ್ಯದೊಳಗೆ ಅಪರಾಧಿಗಳು ಮತ್ತು ಸ್ಫೋಟಕಗಳನ್ನ ಪತ್ತೆ ಹಚ್ಚುವ ಕೆಲಸ ಮಾಡಲಿದೆ. ತರಬೇತಿ ಪೂರ್ಣಗೊಂಡ ಬಳಿಕ ದಟ್ಟ ಅರಣ್ಯದಲ್ಲಿ ಈ ಶ್ವಾನಗಳನ್ನು ಕಾರ್ಯಾಚರಣೆಗೆ ಬಳಸಬಹುದಾಗಿದೆ.
20 ಸಿಬ್ಬಂದಿ ತಂಡದೊಂದಿಗೆ 12 ಶ್ವಾನಗಳನ್ನು ಒಳಗೊಂಡ ತರಬೇತಿ ಕೇಂದ್ರ ಅರಂಭಗೊಂಡಿದೆ. ಪ್ರತಿ ವರ್ಷ 10 ಶ್ವಾನಗಳಿಗೆ ತರಬೇತಿ ನೀಡಿ ಅರಣ್ಯ ಕಾವಲಿಗೆ ನಿಯೋಜಿಸಲಾಗುತ್ತದೆ.
Election Bond ಚುನಾವಣಾ ಬಾಂಡ್ ಪ್ರಕರಣ ರದ್ದುಗೊಳಿಸಿ ಹೈಕೋರ್ಟ್ ಆದೇಶ
Bigg Boss Kannada ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ ಕುಂದಾಪುರ: ಕಾರಣವೇನು?