newsics.com
ಮುಂಬೈ : ಬಾಲಿವುಡ್ ನಟಿ ನರ್ಗಿಸ್ ಫಾಖ್ರಿ ಸಹೋದರಿ ಆಲಿಯಾ ಫಾಖ್ರಿ ಅರೆಸ್ಟ್ ಆಗಿದ್ದಾರೆ. ಮಾಜಿ ಬಾಯ್‌ಫ್ರೆಂಡ್ ಹಾಗೂ ಆತನ ಗೆಳತಿಯನ್ನು ಗುಂಡಿಕ್ಕಿ ಹತ್ಯೆಗೈದ ಆರೋಪಡಿ ನ್ಯೂಯಾರ್ಕ್ ಪೊಲೀಸರು ಅಲಿಯಾ ಫಾಖ್ರಿಯನ್ನು ಬಂಧಿಸಿದ್ದಾರೆ.
ಆಲಿಯಾ ಫಾಖ್ರಿ ಮಾಜಿ ಗೆಳೆಯನಿಂದ ತೀವ್ರವಾಗಿ ಅಸಮಾಧಾನಗೊಂಡಿದ್ದರು. ಆಲಿಯಾ ಫಾಖ್ರಿ ಹಾಗೂ ಬಾಯ್‌ಫ್ರೆಂಡ್ ಸಂಬಂಧ ಗಾಢವಾಗುತ್ತಿದ್ದಂತೆ ಇವರಿಬ್ಬರ ಮಧ್ಯೆ ಮತ್ತೊಬ್ಬಳು ಎಂಟ್ರಿಯಾಗಿದ್ದಳು. ಹೀಗಾಗಿ ಬಾಯ್‌ಫ್ರೆಂಡ್ ಅಲಿಯಾಳಿಂ ದೂರವಾಗಿದ್ದ. ಆದರೆ ಇದನ್ನು ಅಲಿಯಾಗೆ ಸಹಿಸಲು ಸಾಧ್ಯವಾಗದೆ ಮಾಜಿ ಬಾಯ್‌ಫ್ರೆಂಡ್ ಹಾಗೂ ಆತನ ಗೆಳತಿಯನ್ನು ಹತ್ಯೆ ಮಾಡಿದ್ದಾಳೆ ಅನ್ನೋ ಆರೋಪ ಎದುರಿಸುತ್ತಿದ್ದಾರೆ.
ಮಾಜಿ ಬಾಯ್‌ಫ್ರೆಂಡ್ ವಾಸವಿದ್ದ ಎರಡು ಅಂತಸ್ತಿನ ಕಟ್ಟಡಕ್ಕೆ ಕೆಳಗಿನಿಂದ ಬೀಗ ಹಾಕಿ ಬೆಂಕಿ ಹಚ್ಚಿದ್ದಾಳೆ. ದಟ್ಟ ಹೊಗೆ, ಗ್ಯಾಸೋಲಿನ್ ಹಾಗೂ ಸುಟ್ಟ ಗಾಯಗಳಿಂದ ಆಲಿಯಾ ಫಾಖ್ರಿ ಮಾಜಿ ಬಾಯ್‌ಪ್ರೆಂಡ್ ಹಾಗೂ ಆತನ ಗೆಳತಿ ಇಬ್ಬರು ಮೃತಪಟ್ಟಿದ್ದಾರೆ.
ನ್ಯೂಯಾರ್ಕ್ ಪೊಲೀಸರು ಅಲಿಯಾ ಫಾಖ್ರಿಯನ್ನು ಬಂಧಿಸಿದ್ದರೆ. ಬಂಧನ ಬಳಿಕ ಅಲಿಯಾ ಫಾಖ್ರಿಯನ್ನು ಕ್ರಿಮಿನಲ್ ಕೋರ್ಟ್‌ಗೆಹಾಜರು ಪಡಿಸಿದ್ದಾರೆ. ಜಿಲ್ಲಾ ಅಟಾರ್ನಿ ಮಿಲಿಂಡಾ ಕಟ್ಜ್, ಅಲಿಯಾ ಫಾಖ್ರಿಗೆ ಜಾಮೀನು ನೀಡಲು ನಿರಾಕರಿಸಿದ್ದರೆ. ಇಬ್ಬರು ಅಮಾಯಕರನ್ನು ಅಪಾಯದಲ್ಲಿ ಸಿಲುಕಿಸಿ ಬೆಂಕಿ ಹಚ್ಚಿ ಹತ್ಯೆ ಮಾಡಿರುವ ಆರೋಪ ಈಕೆಯ ಮೇಲಿದೆ. ಇದು ಗಂಭೀರ ಪ್ರಕರಣವಾಗಿದ್ದು, ಜಾಮೀನು ನಿರಾಕರಿಸಲಾಗಿದೆ ಎಂದು ಕೋರ್ಟ್ ಹೇಳಿದೆ.