newsics.com
ಬುಲಂದ್ ಶಹರ್(ಉತ್ರ ಪ್ರದೇಶ): ಹುರಿದ ಕಡಲೆಕಾಯಿ ತಿಂದು ಮಗು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.
ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಈ ಘಟನೆ ನಡೆದಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಲಂದ್‌ಶಹರ್‌ನ ನರಸೇನಾ ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಮ್ಮದ್‌ಪುರ ಬರ್ವಾಲಾ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ನವೆಂಬರ್ 24 ರ ಸಂಜೆ ಸಂತ್ರಸ್ತರ ಕುಟುಂಬವು ಮಾರುಕಟ್ಟೆಯಲ್ಲಿ ಹುರಿದ ಕಡಲೆಕಾಯಿ ಖರೀದಿಸಿ ತಿಂದಿದ್ದರು ಎಂದು ಹೇಳಲಾಗುತ್ತಿದೆ. ನಂತರ 50 ವರ್ಷದ ಅಜ್ಜ ಕಲುವಾ ಸಿಂಗ್ ಮತ್ತು 8 ವರ್ಷದ ಅಮಾಯಕ ಮೊಮ್ಮಗ ಲವಿಶ್ ಸಾವನ್ನಪ್ಪಿದ್ದಾರೆ. ಮಂಗಳವಾರ ಸೊಸೆ ಜೋಗೇಂದ್ರಿ ಕೂಡ ಸಾವನ್ನಪ್ಪಿದ್ದಾರೆ.
ಮಾಹಿತಿ ಮೇರೆಗೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದು, ಸಾವಿಗೆ ಕಾರಣ ಪತ್ತೆ ಹಚ್ಚುವಲ್ಲಿ ಆಡಳಿತಾಧಿಕಾರಿಗಳು ನಿರತರಾಗಿದ್ದಾರೆ. ಮೃತರ ಸಂಬಂಧಿಕರು ಮರಣೋತ್ತರ ಪರೀಕ್ಷೆ ನಡೆಸದೆ ಶವವನ್ನು ಸುಟ್ಟು ಹಾಕಿದ್ದಾರೆ. ಮೃತ ಮಹಿಳೆಯ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಸಿಕ್ಕ ಬಳಿಕ ಸಾವಿಗೆ ಕಾರಣವೇನು ಎಂಬುದು ಸ್ಪಷ್ಟವಾಗಲಿದೆ.
IT Raid ತೆರಿಗೆ ವಂಚನೆ ಹಿನ್ನೆಲೆ: ಬೆಂಗಳೂರಿನ ಉದ್ಯಮಿ, ಬಿಲ್ಡರ್‌ಗಳ ಮನೆ ಮೇಲೆ ಐಟಿ ದಾಳಿ
Gang rape by teachers ಅಪ್ರಾಪ್ತ ಬಾಲಕಿ ಮೇಲೆ ಶಿಕ್ಷಕರಿಂದಲೇ ಸಾಮೂಹಿಕ ಅತ್ಯಾ*ಚಾರ, ನಾಲ್ವರ ಬಂಧನ