Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಅನಾವರಣ > ಇದು ನೀರಲ್ಲೂ ಓಡೋ ಕಾರು… ಆನಂದ್ ಮಹೀಂದ್ರಾ ಬಳಿ ಹರ್ಷ್ ಗೋಯೆಂಕಾ ಕೇಳಿದ್ದೇನು? ವಿಡಿಯೋ ನೋಡಿ
ಅನಾವರಣಪ್ರಮುಖವಿದೇಶವೈರಲ್

ಇದು ನೀರಲ್ಲೂ ಓಡೋ ಕಾರು… ಆನಂದ್ ಮಹೀಂದ್ರಾ ಬಳಿ ಹರ್ಷ್ ಗೋಯೆಂಕಾ ಕೇಳಿದ್ದೇನು? ವಿಡಿಯೋ ನೋಡಿ

Share
2 Min Read
SHARE

newsics.com

ಜನಪ್ರಿಯ ಉದ್ಯಮ ಸಂಸ್ಥೆ ರಾಮ ಪ್ರಸಾದ್ ಗೋಯೆಂಕಾ (RPG) ಗ್ರೂಪ್ ಅಧ್ಯಕ್ಷರಾದ ಹರ್ಷ್ ಗೋಯೆಂಕಾ (Harsh Goenka) ಅವರು ಪ್ರಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಅವರ ಬಳಿ ವಿಶೇಷವಾದ ಬೇಡಿಕೆಯೊಂದನ್ನು ಇಟ್ಟಿದ್ದಾರೆ.

ಹರ್ಷ್ ಗೋಯೆಂಕಾ ಬೇಡಿಕೆಯ ಬಗ್ಗೆಯೇ ಈಗ ಎಲ್ಲೆಡೆ ಚರ್ಚೆ ಜೋರಾಗಿಯೇ ಸಾಗಿದೆ.

‘ಎಕ್ಸ್’ ಖಾತೆಯಲ್ಲಿ ಉದ್ಯಮಿ ಹರ್ಷ್ ಗೋಯೆಂಕಾ, ಚೀನಾ ಒಡೆತನದ ‘ಬಿವೈಡಿ ಯಾಂಗ್ವಾಂಗ್ ಯು8’ ಎಸ್‌ಯುವಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನ್ನು ಆನಂದ್ ಮಹೀಂದ್ರಾ ಅವರಿಗೂ ಟ್ಯಾಗ್ ಮಾಡಿದ್ದಾರೆ. ‘ಈ ಕಾರು ನದಿ ಸೇರಿ ಎಲ್ಲ ಪ್ರದೇಶಗಳಿಗೂ ಸರಿಹೊಂದುತ್ತದೆ. ನನ್ನ ಸ್ನೇಹಿತ ಆನಂದ್ ಮಹೀಂದ್ರಾ, ಇದನ್ನು ನಮ್ಮ ದೇಶದಲ್ಲೂ ಪರಿಚಯಿಸುತ್ತಾರೆಂಬ ವಿಶ್ವಾಸವಿದೆ’ ಎಂದಿದ್ದಾರೆ.

ಆದರೆ, ಹರ್ಷ್ ಗೋಯೆಂಕಾ ಅವರ ಪೋಸ್ಟ್‌ಗೆ ಆನಂದ್ ಮಹೀಂದ್ರಾ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ನೂತನ ಬಿವೈಡಿ ಯಾಂಗ್ವಾಂಗ್ ಯು8 (BYD YangWang U8) ಚೀನಾ ಹಾಗೂ ವಿವಿಧ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದೊಂದು ಶಕ್ತಿಯುತವಾಗಿರುವ ಎಸ್‌ಯುವಿಯಾಗಿದ್ದು, ರಸ್ತೆ ಹಾಗೂ ನೀರಿನ ಮೇಲೆ ಸುಲಭವಾಗಿ ಚಲಿಸಬಲ್ಲದು. ಈ ಕಾರು ಹೊರಭಾಗದಲ್ಲಿ ಅತ್ಯಾಕರ್ಷಕ ವಿನ್ಯಾಸ ಹೊಂದಿದೆ.

ಹೊಸ ಬಿವೈಡಿ ಯಾಂಗ್ವಾಂಗ್ ಯು8 ಎಸ್‌ಯುವಿ ವಿಶಿಷ್ಟವಾದ ‘ಯಾಚಿಂಗ್’ ಎಂಬ ಡ್ರೈವಿಂಗ್ ಮೋಡ್‌ ಹೊಂದಿದೆ. ಇದು ನೀರಿನಲ್ಲಿ ಕಾರನ್ನು ಓಡಿಸಲು ಅನುವು ಮಾಡಿಕೊಡುತ್ತದೆ. ಅಪಾಯ ಎದುರಾದ ಸಂದರ್ಭದಲ್ಲಿ 3 ಕೆಎಂಪಿಹೆಚ್ ವೇಗದಲ್ಲಿ ಸುಮಾರು 30 ನಿಮಿಷ ಈ ಕಾರನ್ನು ಚಲಾಯಿಸಬಹುದು. ಈ ವೇಳೆ ಒಂದು ಹನಿ ನೀರು ಕೂಡ ಎಸ್‌ಯುವಿ ಒಳಭಾಗ ಪ್ರವೇಶಿಸುವುದಿಲ್ಲ.

ಈ ಕಾರು ಹೈಬ್ರಿಡ್ ಎಂಜಿನ್ ಆಯ್ಕೆ ಹೊಂದಿದೆ. 49.05 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನೊಂದಿಗೆ 2.0-ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 1,184 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಉತ್ಪಾದಿಸುತ್ತದೆ. ಕೇವಲ 3.6 ಸೆಕೆಂಡುಗಳಲ್ಲಿ 0-100 ಕೆಎಂಪಿಹೆಚ್ ವೇಗ ಹೊಂದಲಿದೆ.

ನೂತನ ಬಿವೈಡಿ ಯಾಂಗ್ವಾಂಗ್ ಯು8 ಎಸ್‌ಯುವಿ ಸಂಪೂರ್ಣ ಚಾರ್ಜ್‌ನಲ್ಲಿ 180 ಕಿಲೋಮೀಟರ್ ಕ್ರಮಿಸುತ್ತದೆ. 75 ಲೀಟರ್ ಸಾಮರ್ಥ್ಯದ ಪ್ಯೂಯೆಲ್ (ಇಂಧನ) ಟ್ಯಾಂಕ್ ಹೊಂದಿದ್ದು, ಒಟ್ಟಿಗೆ 1,000 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇದರ ಬ್ಯಾಟರಿ ಪ್ಯಾಕ್ 18 ನಿಮಿಷಗಳಲ್ಲಿಯೇ 30 ರಿಂದ 80% ಚಾರ್ಜ್ ಆಗುತ್ತದೆ. ರೂ.1.23 ಕೋಟಿ ಬೆಲೆಯಲ್ಲಿಯೂ ಖರೀದಿಗೆ ದೊರೆಯುತ್ತದೆ.

ಬಿವೈಡಿ ಕಂಪನಿ, ಭಾರತದ ಮಾರುಕಟ್ಟೆಯಲ್ಲಿಯೂ ಸೀಲ್ ಮತ್ತು ಅಟ್ಟೊ 3 ಸೇರಿ ವಿವಿಧ ಕಾರುಗಳನ್ನು ಮಾರಾಟ ಮಾಡುತ್ತಿದೆ. ಕಳೆದ ತಿಂಗಳು ಕಂಪನಿಯು ಇಮ್ಯಾಕ್ 7 (eMAX 7) ಹೆಸರಿನ ಎಲೆಕ್ಟ್ರಿಕ್ ಎಂಪಿವಿಯನ್ನು ಬಿಡುಗಡೆಗೊಳಿಸಿತ್ತು. ಇದು ರೂ.26.90 ಲಕ್ಷದಿಂದ ರೂ.29.90 ಲಕ್ಷ ಎಕ್ಸ್ ಶೋರೂಂ ಬೆಲೆ ಹೊಂದಿದೆ.

ನೂತನ ಬಿವೈಡಿ ಇಮ್ಯಾಕ್ 7 ಎಂಪಿವಿ, 55.4 ಮತ್ತು 71.8 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆ ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 420 ರಿಂದ 530 ಕಿಲೋಮೀಟರ್ ಕ್ರಮಿಸುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋ ಎಸಿ ಮತ್ತು ವೈರ್‌ಲೆಸ್ ಫೋನ್ ಚಾರ್ಜರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಕಾರಿನಲ್ಲಿ 7 ಮಂದಿ ಆರಾಮವಾಗಿ ಪ್ರಯಾಣಿಸಬಹುದಾಗಿದೆ.

https://twitter.com/i/status/1856313178251993464

ಹಾರಾಡುತ್ತಿದ್ದ ಅಪಾಚೆ ಹೆಲಿಕಾಪ್ಟರ್‌ನಲ್ಲೇ ಯೋಧರ ರಾಸಲೀಲೆ, ಇಬ್ಬರ ಬಂಧನ

ಬಿಗ್ ಬಾಸ್ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಚೈತ್ರಾ ಕುಂದಾಪುರ, ಆಸ್ಪತ್ರೆಗೆ ದಾಖಲು

ಈ ನಾಲ್ಕು ಹಣ್ಣುಗಳು ಪುರುಷರಿಗೆ ವಯಾಗ್ರದಷ್ಟೇ ಶಕ್ತಿ ಕೊಡಬಲ್ಲವು!

TAGGED:It is a car that runs on water
Share This Article
Facebook Twitter Copy Link Print
Previous Article ದಿನ‌ ಭವಿಷ್ಯ… 16-11-2024, ಶನಿವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?
Next Article ಆಸ್ಪತ್ರೆಯಲ್ಲಿ ಬೆಂಕಿ, 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Popular Posts

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

You Might Also Like

ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?