newsics.com
ಬೆಂಗಳೂರು: ತನ್ನ ಮಗನ ಸೇವೆ ಮಾಡಲಿಲ್ಲವೆಂಬ ಕಾರಣಕ್ಕೆ ಪ್ರಾಂಶುಪಾಲೆಯೊಬ್ಬರು ವಿದ್ಯಾರ್ಥಿನಿ ಮೇಲೆ ದರ್ಪ ತೋರಿದ್ದು, ಬೆತ್ತದಲ್ಲಿ ಬಾಸುಂಡೆ ಬರುವಂತೆ ಥಳಿಸಿರುವ ಘಟನೆ ಬೆಂಗಳೂರು ನಗರದ ಹೊರವಲಯದ ದೇವನಹಳ್ಳಿಯ ವಿಜಯಪುರ ಪಟ್ಟಣದಲ್ಲಿ ನಡೆದಿದೆ.
ಶಾಲೆಯಲ್ಲಿ ಓದುತ್ತಿದ್ದ 5ನೇ ತರಗತಿಯ ವಿದ್ಯಾರ್ಥಿನಿಗೆ ಬೆತ್ತದ ಮೂಲಕ ಥಳಿಸಿರುವ ಆರೋಪ ಇದೀಗ ಪ್ರಾಂಶುಪಾಲೆಯ ಮೇಲಿದೆ.
ತನ್ನ ಮಗನ ಸೇವೆ ಮಾಡಿಲ್ಲವೆಂದು 5ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಪ್ರಿನ್ಸಿಪಾಲ್ ಉಷಾ ಕಿರಣ್ ಹಲ್ಲೆ ಮಾಡಿದ್ದಾರೆ. ಪ್ರಾಂಶುಪಾಲೆ ಉಷಾ ಕಿರಣ್ ವಿರುದ್ಧ ಇದೀಗ ಪೋಷಕರು ಆಕ್ರೋಶ ಹೊರಹಾಕಿದ್ದು, ಘಟನಾ ಸ್ಥಳಕ್ಕೆ ವಿಜಯಪುರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.
ನನ್ನ ಮಗ ಒಬ್ಬ ವಿಶೇಷ ಚೇತನ ಅವನಿಗೆ ತಿರುಗಾಡಲು ಆಗಲ್ಲ. ಅವನಿಗೆ ಸಹಾಯ ಬೇಕಾಗುತ್ತದೆ. ನಾನು ಹೊಡೆಯಬಾರದಿತ್ತು, ನನ್ನಿಂದ ತಪ್ಪಾಗಿದೆ. ಶಾಲೆಯಲ್ಲಿ ಕೆಲವೊಮ್ಮೆ ಮಕ್ಕಳ ಸಹಾಯ ಬೇಕಾಗುತ್ತದೆ. ನಾನು ಆ ಮಗುವಿನ ಕೈ ಮತ್ತು ಕಾಲಿಗೆ ಹೊಡೆದಿದ್ದೇನೆ ಎಂದು ಪ್ರಿನ್ಸಿಪಾಲ್ ಉಷಾ ಕಿರಣ್ ತಪ್ಪು ಒಪ್ಪಿಕೊಂಡಿದ್ದಾರೆ.