newsics.com
ಬೆಂಗಳೂರು : ರಾಜ್ಯದ ಜನರಿಗೆ ಮತ್ತೊಂದು ಶಾಕ್ ಸಿಕ್ಕಿದೆ. ಉಪಚುನಾವಣೆ ಬಳಿಕ KSRTC, BMTC ಸಾರಿಗೆ ಬಸ್ ಟಿಕೆಟ್ ದರ ಸದ್ಯದಲ್ಲಿಯೇ ಏರಿಕೆಯಾಗಲಿದೆ ಎನ್ನುವ ಮಾಹಿತಿ ಕೇಳಿ ಬಂದಿದೆ.
ಹೌದು, ಕೆಎಸ್‌ಆರ್ ಟಿಸಿ, ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಿಸಲು ಸರ್ಕಾರ ಅನುಮತಿ ನೀಡಿದೆ ಎನ್ನಲಾಗುತ್ತದೆ. ಅಲ್ಲದೇ,ಕಳೆದ ನಾಲ್ಕು ವರ್ಷದಿಂದ ಕೆಎಸ್‌ಆರ್ ಟಿಸಿ ಟಿಕೆಟ್ ದರ ಪರಿಷ್ಕರಣೆ ಆಡಿಲ್ಲ. 2013 ರಿಂದ ಬಿಎಂಟಿಸಿ ಬಸ್ ಪ್ರಯಾಣ ಸಹ ಏರಿಕೆ ಆಗಿಲ್ಲ. ಕಲ್ಯಾಣ ಕರ್ನಾಟಕ ಹಾಗೂ ವಾಯುವ್ಯ ಕರ್ನಾಟಕ ಬಸ್ ಪ್ರಯಾಣ ನಾಲ್ಕು ವರ್ಷದಿಂದ ಪರಿಷ್ಕರಣೆ ಆಗಿಲ್ಲ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಟಿಕೆಟ್ ದರ ಅನಿವಾರ್ಯ ಎಂದು ಸಾರಿಗೆ ನಿಗಮಗಳು ಹೇಳುತ್ತಿವೆ. ಈ ಹಿನ್ನೆಲೆ ಚುನಾವಣಾ ಬಳಿಕ ಬಸ್ ದರ ಏರಿಸುವ ಬಗ್ಗೆ ಭರವಸೆಯನ್ನು ಸರ್ಕಾರ ನೀಡಿದೆ ಎನ್ನಲಾಗಿದೆ.
ಡೀಸೆಲ್ ದರ ಹೊರೆಯಾಗುತ್ತಿರುವ ಕಾರಣ ಬಸ್ ಪ್ರಯಾಣ ದರ ಅನಿವಾರ್ಯ ಎಂದು ನಿಗಮಗಳು ಸರ್ಕಾರಕ್ಕೆ ಮನದಟ್ಟು ಮಾಡಿವೆ. ಹಾಗಾಗಿ ಉಪಚುನಾವಣೆ ಮುಗಿದ ಬಳಿಕ ನಾಲ್ಕು ನಿಗಮಗಳ ವ್ಯಾಪ್ತಿಯಲ್ಲಿ ಬಸ್ ದರ ಪರಿಷ್ಕರಣೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.