newsics.com
ಜಾರ್ಖಂಡ್: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಅಖಾಡ ತಯಾರಾಗಿದ್ದು, ಇದೇ ನವೆಂಬರ್ 13 ಮತ್ತು 20ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 23ರಂದು ಮತಎಣಿಕೆ ನಡೆದು ಫಲಿತಾಂಶ ಹೊರಬರಲಿದೆ.
ಇನ್ನು ಚುನಾವಣೆ ಗದ್ದಲದಲ್ಲಿರುವ ಜಾರ್ಖಂಡ್‌ನಲ್ಲಿ ಇದೀಗ ಆದಾಯ ತೆರಿಗೆ ಇಲಾಖೆ ಎಂಟ್ರಿ ಕೊಟ್ಟಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಆಪ್ತ ಸಲಹೆಗಾರ ಸುನಿಲ್ ಶ್ರೀವಾಸ್ತವ ಮತ್ತು ಅವರ ಜತೆ ಸಂಬಂಧ ಹೊಂದಿರುವವರ ವಿರುದ್ಧ ಆದಾಯ ತೆರಿಗೆ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಮಾಹಿತಿ ಪ್ರಕಾರ ಸುನಿಲ್ ಶ್ರೀವಾಸ್ತವ, ಅವರ ಕುಟುಂಬ ಸದಸ್ಯರು ಮತ್ತು ಇತರರಿಗೆ ಸಂಬಂಧಿಸಿದ ಒಟ್ಟು 16-17 ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಮೂಲಗಳ ಪ್ರಕಾರ, ರಾಂಚಿಯ ಏಳು ಸ್ಥಳಗಳು ಮತ್ತು ಜಮ್ಶೆಡ್‌ಪುರದ 9 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಯುತ್ತಿದೆ. ಜಮ್ಶೆಡ್‌ಪುರದ ಅಂಜನಿಯಾ ಇಸ್ಪತ್ ಸೇರಿದಂತೆ ಇತರ ಸ್ಥಳಗಳಲ್ಲಿ ಸಹ ದಾಳಿ ನಡೆಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ. ತೆರಿಗೆ ಅಕ್ರಮಗಳು ನಡೆಸಿರುವ ಕುರಿತು ಬಂದಿರುವ ದೂರಿನ ಆಧಾರದ ಮೇಲೆ ಈ ದಾಳಿ ನಡೆಸಿದ್ದಾರೆ.