newsics.com
ಪರ ಪುರುಷನೊಂದಿಗೆ ಹೋಟೆಲ್ ರೂಮ್‌ಗೆ ಹೋಗಿ ಮಹಿಳೆಯೊಬ್ಬಳು ಗಂಡನ ಕೈಗೆ ಸಿಕ್ಕಿಬಿದ್ದಿದ್ದಾಳೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
ಇನ್ನು ವಿಡಿಯೊ ಕಂಡು ಇಂತಹ ನಾಚಿಕೆಗೇಡಿನ ಕೃತ್ಯಗಳಿಂದಲೇ ಇಂದು ಅದೆಷ್ಟೋ ಜನ ಮದುವೆಯಾಗಲು ಹಿಂಜರಿಯುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ನಿ ಪರಪುರುಷನೊಂದಿಗೆ ಓಯೋ ರೂಮ್‌ನಲ್ಲಿ ಇರುವ ವಿಚಾರ ತಿಳಿದು ಅಲ್ಲಿಗೆ ಬಂದಂತಹ ಪತಿರಾಯ ವಿಡಿಯೋ ಮಾಡುತ್ತಾ ಇಲ್ಲಿಗೆ ನೀನ್ಯಾಕೆ ಬಂದಿದ್ದೀಯಾ? ಯಾರ ಜೊತೆ ಬಂದಿದ್ದೀಯಾ? ಕೋಪದಲ್ಲಿ ಪ್ರಶ್ನೆಗಳನ್ನು ಕೇಳುತ್ತಾ ಆಕೆಯ ಬಾಯ್‌ಫ್ರೆಂಡ್‌ಗಾಗಿ ಹುಡುಕಾಟ ನಡೆಸಿದ್ದಾನೆ. ಈ ಕುರಿತ ವಿಡಿಯೋವನ್ನು venom1s ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದು ತುಂಬಾ ಭಯಾನಕ ಸಂಗತಿಯಾಗಿದೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ವೈರಲ್ ವಿಡಿಯೋದಲ್ಲಿ ಪತ್ನಿ ತನ್ನ ಗಂಡನ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ದೃಶ್ಯವನ್ನು ಕಾಣಬಹುದು. ಅಷ್ಟೇ ಅಲ್ಲದೆ ಅಲ್ಲಿ ಗಂಡಸಿನ ಶೂ ಇರುವುದನ್ನು ಕಂಡು ಶಾಕ್ ಆದ ಗಂಡ, ಈಕೆ ಪರಪುರುಷನೊಂದಿಗೆಯೇ ಬಂದಿದ್ದಾಳೆ ಎಂದು ಗೊತ್ತಾಗಿ ಆತನಿಗಾಗಿ ಇಡೀ ರೂಮ್ ಹುಡುಕಾಟ ನಡೆಸಿದ್ದಾನೆ.