Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ವಾರ ಭವಿಷ್ಯ > ಈ ವಾರ ಎಲ್ಲರಲ್ಲೂ ಆತ್ಮಬಲ, ದೇಹಬಲ ಕುಸಿತ, ಅಂಗಾರಕ, ಸೂರ್ಯನನ್ನು ಧ್ಯಾನಿಸಿ
ಪಂಚಾಂಗವಾರ ಭವಿಷ್ಯ

ಈ ವಾರ ಎಲ್ಲರಲ್ಲೂ ಆತ್ಮಬಲ, ದೇಹಬಲ ಕುಸಿತ, ಅಂಗಾರಕ, ಸೂರ್ಯನನ್ನು ಧ್ಯಾನಿಸಿ

Share
4 Min Read
SHARE

newsics.com

ನ್ಯೂಸಿಕ್ಸ್.ಕಾಮ್

03-11-2024 ರಿಂದ 09-11-2024

ಈ‌ ವಾರ ಕುಜನು ನೀಚ ಹಾಗೂ ಸೂರ್ಯನೂ ನೀಚನಾಗಿರುವ ಕಾರಣ ಆತ್ಮಬಲ ಹಾಗೂ ದೇಹಬಲವು ಎಲ್ಲರಲ್ಲಿಯೂ ಕಡಿಮೆಯಾಗುವುದು ಸಹಜ.‌ ಅದನ್ನು ದೈವಬಲದಿಂದ ಸರಿ ಮಾಡಿಕೊಳ್ಳಲು ಸಾಧ್ಯ. ಅಂಗಾರಕ‌ ಹಾಗೂ ಸೂರ್ಯನನ್ನು ಪ್ರತಿದಿನ‌ ಯಥಾಸಾಧ್ಯ ಜಪಿಸಿ.

ಮೇಷ

ಈ ವಾರ ನಿಮಗೆ ಶುಭವಿದೆ. ಶುಕ್ರನು ನವಮಕ್ಕೆ ಹೋಗುವ ಕಾರಣ ಕಲಾವಿದರಿಗೆ ಪ್ರಶಂಸೆ ಹಾಗೂ ಪ್ರಗತಿ ಸಿಗುವುದು. ಪ್ರೇಮವು ಗಟ್ಟಿಯಾಗಲು ಅವಕಾಶ ಸಿಗುವುದು. ರವಿಯು ಸಪ್ತಮದಲ್ಲಿ ಇರುವುದು ವಿವಾಹ ಯೋಗ ತಪ್ಪಿಸುವನು. ಬಂಧುಗಳಿಗೆ ನಿಮ್ಮ ಬಗ್ಗೆ ಸದ್ಭಾವ ಇರದು. ಪ್ರಾತಃಕಾಲದಲ್ಲಿ ಆದಿತ್ಯ ಹೃದಯವನ್ನು ಜಪಿಸಿ.

ವೃಷಭ

ರಾಶಿ ಚಕ್ರದ ಎರಡನೇ ರಾಶಿಯವರಿಗೆ ಮಿಶ್ರಫಲವಿದೆ.‌ ಶುಕ್ರನು ರಾಶಿಯ ಅಧಿಪತಿಯಾಗಿ ಅಷ್ಟಮದಲ್ಲಿರುವ ಕಾರಣ ದಾಂಪತ್ಯದಲ್ಲಿ ಸುಖ ಕಡಿಮೆಯಾಗುವುದು.‌ ಭೋಗವಸ್ತುಗಳ ಮೇಲೆ ಆಸಕ್ತಿ ಹೆಚ್ಚಾಗುವುದು. ಧನ ನಷ್ಟ ಮಾಡಿಕೊಳ್ಳುವಿರಿ. ಶನಿಯು ದಶಮದಲ್ಲಿ ಇರುವುದು ವೃತ್ತಿಯಲ್ಲಿ ನಿಮಗೆ ಆಸಕ್ತಿ ಕಾಣಿಸದು. ಉದ್ಯೋಗಕ್ಕಾಗಿ ಉದ್ಯೋಗವನ್ನು ಮಾಡುವಿರಿ. ಧ್ಯಾನದಿಂದ‌ ಏಕಾಗ್ರತೆಯನ್ನು ಹೆಚ್ಚು ಪಡೆಯಲು ಸಾಧ್ಯ.

ಮಿಥುನ

ಈ ವಾರದಲ್ಲಿ ನಿಮಗೆ ಶುಭವಿದೆ. ಪ್ರೇಮದಲ್ಲಿ ಅಪೇಕ್ಷೆ ಇರುವುದು. ಆದರೆ ಪುರುಷರಿಂದ ತೊಂದರೆಗ ಒಳಗಾಗುವಿರಿ. ಉದ್ಯೋಗದಲ್ಲಿ ಸರಿಯಾದ ತೊಡಗುವಿಕೆ ಕಾಣಿಸದು. ಉದ್ಯಮದಲ್ಲಿ ಪ್ರಗತಿಯನ್ನು ಕಾಣಲಾಗದು. ಬಂಧುಗಳ ಬಗ್ಗೆ ನಿರಾಶಾ ಭಾವವು ಬರುವುದು. ಕುಟುಂಬದಿಂದ ನಿಮಗೆ ಪೂರ್ಣ ಸಮಾಧಾನ ದೊರೆಯದು. ಮಕ್ಕಳ ಚಿಂತೆ ಕಾಡುವುದು. ಸಂತಾನ ಗೋಪಾಲಕೃಷ್ಣನನ್ನು ಪೂಜಿಸಿ.

ಕರ್ಕಾಟಕ

ಈ ರಾಶಿಯವರಿಗೆ ಶುಭಾಶುಭ ಫಲವಿದೆ. ಶುಕ್ರನು ಷಷ್ಠಸ್ಥಾನಕ್ಕೆ ಹೋಗಲಿದ್ದು ಪ್ರೇಮದಲ್ಲಿ ಕಲಹ, ಶತ್ರುತ್ವವೂ ಕಾಣಿಸಿಕೊಳ್ಳುವುದು. ವಿದ್ಯಾಭ್ಯಾಸದಲ್ಲಿ ಆಸಕ್ತಿ ಹಾಗೂ ಅದಕ್ಕೆ ಬೇಕಾದ ಸಿದ್ಧತೆ ಹಾಗೂ ಯೋಗ್ಯವಾದ ಸ್ಥಾನವೂ ಪ್ರಾಪ್ತವಾಗಲಿದೆ. ದೈಹಿಕವಾಗಿ ನಿಶ್ಶಕ್ತಿಯ ತೊಂದರೆ ಅನುಭವಿಸಬೇಕಾಗುವುದು. ತಂದೆಯ ಜತೆ ಸೌಹಾರ್ದ ಇರುವುದು. ವೃತ್ತಿಯನ್ನು ಸರಿಯಾಗಿ ನಿರ್ವಹಿಸಲು ಕಷ್ಟವಾಗುವುದು. ಧೈರ್ಯವನ್ನು ಪಡೆಯಲು ಕಾರ್ತಿಕೇಯನನ್ನು ಸ್ಮರಿಸಿ.

ಸಿಂಹ

ಈ ವಾರದಲ್ಲಿ ನಿಮಗೆ ಮಿಶ್ರಫಲವಿದೆ. ಶುಕ್ರನು ರಾಶಿಯನ್ನು ಬದಲಾಯಿಸುವ ಕಾರಣ ವಿಜ್ಞಾನ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೆಚ್ಚಾಗುವುದು. ಕುಜನು ದ್ವಾದಶದಲ್ಲಿ ಇರುವುದರಿಂದ ಉತ್ಸಾಹ ಕಡಿಮೆಯಾಗಲಿದೆ. ಯಾರ ಮಾತಿನಿಂದಲೂ ನಿಮಗೆ ಪ್ರೇರಣೆ ಸಿಗದು. ಎಲ್ಲ ಸಂದರ್ಭದಲ್ಲಿಯೂ ಕೋಪವು ಹೆಚ್ಚಾಗುವುದು. ಯಾರದ್ದಾದರೂ ಪ್ರಭಾವವನ್ನು ಬಳಸಿ ಉದ್ಯೋಗಕ್ಕೆ ಸೇರಿಕೊಳ್ಳುವಿರಿ. ಬಲಗಣ್ಣಿನ ತೊಂದರೆ ಕಾಣಿಸಿಕೊಳ್ಳುವುದು. ದೃಷ್ಟಿ ಗಣಪತಿಯನ್ನು ಉಪಾಸನೆ ಮಾಡಿ.

ಕನ್ಯಾ

ರಾಶಿ ಚಕ್ರದ ಆರನೇ ರಾಶಿಯವರಿಗೆ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಶುಭವಿದೆ. ಶುಕ್ರನು ಚತುರ್ಥ ಸ್ಥಾನಕ್ಕೆ ಹೋಗಲಿದ್ದು ಬಾಂಧವ್ಯದಲ್ಲಿ ಹೊಸತನ ಕಾಣಿಸುವುದು. ಸಂಗಾತಿಯಿಂದ ಖುಷಿ ಸಿಗಲಿದೆ. ಉದ್ಯೋಗದಲ್ಲಿ ನಿಮ್ಮನ್ನು ಗುರುತಿಸಿಕೊಳ್ಳುವ ತಂತ್ರಗಳನ್ನು ಮಾಡುವಿರಿ. ಸಾಹಿತ್ಯ ಕ್ಷೇತ್ರದಲ್ಲಿ ಪ್ರಗತಿ ಕಾಣಬಹುದು. ವಿವಾಹದ ಬಗ್ಗೆ ಗಮನಹರಿಸಬಹುದು. ಗುರುಜನರ ನಡುವೆ ಶತ್ರುತ್ವ ಕಾಣಿಸುವುದು. ಗಣಪತಿಗೆ ಪ್ರಿಯವಾದ ದೂರ್ವಾಪತ್ರವನ್ನು ಸಮರ್ಪಿಸಿ.

ತುಲಾ

ಏಳನೇ ರಾಶಿ ಇದಾಗಿದ್ದು ರಾಶಿಯ ಅಧಿಪತಿ ತೃತೀಯದಲ್ಲಿ ಇರುವನು. ಸಹೋದರರ ನಡುವೆ ಸಾಮರಸ್ಯ ಕಂಡರೂ ಕೆಲವು ವಿಚಾರದಲ್ಲಿ ಕಲಹ ಕಾಣಿಸುವುದು. ವೃತ್ತಿಯ ಬಗ್ಗೆ ಭರವಸೆ ಸಾಲದು. ಪ್ರೇಮಿಗಳು ಕೆಲವು ದಿನ ವಿವಾಹದ ವಿಚಾರಕ್ಕೆ ಹೋಗದಿದ್ದರೆ ಉತ್ತಮ. ಜ್ವರ ಬಾಧೆ ಕಾಣಿಸಿಕೊಳ್ಳುವುದು. ಶತ್ರುಗಳು ಬೇರೆ ರೀತಿಯ ಆಲೋಚನೆ ಮಾಡಬಹುದು. ಮಕ್ಕಳಿಂದ ನೀವು ಎಣಿಸಿದ ಸಂಗತಿಗಳು ಬಾರವು. ದುರ್ಗಾ ಮಾತೆಯ ಕೃಪೆ ಅತ್ಯಗತ್ಯ.

ವೃಶ್ಚಿಕ

ನವೆಂಬರ್ ಮೊದಲ ವಾರದಲ್ಲಿ ಈ ರಾಶಿಯವರಿಗೆ ಶುಭ. ಶುಕ್ರನು ದ್ವಿತೀಯದಲ್ಲಿ ಇರುವ ಕಾರಣ ಕುಟುಂಬದಲ್ಲಿ ನೆಮ್ಮದಿ. ವಾಹನದಿಂದ ಲಾಭ. ಭೂಮಿಯ ವ್ಯವಹಾರದಲ್ಲಿ ಪ್ರಗತಿ ಕಾಣಿಸುವುದು. ರಾಶಿಯ ಅಧಿಪತಿ ನೀಚನಾಗಿ ನವಮದಲ್ಲಿರುವ ಕಾರಣ ನಿಮ್ಮ ಬಗ್ಗೆ ಪೂರ್ಣ ವಿಶ್ವಾಸವಿರದು. ಎಲ್ಲದಕ್ಕೂ ಅಳುಕು ಕಾಣಿಸುವುದು. ಗೊಂದಲದ ನಿವಾರಣೆ ಕಷ್ಟವಾಗುವುದು. ಸತ್ಪಾತ್ರರಿಗೆ ಕೆಂಪು ಬಣ್ಣದ ವಸ್ತ್ರವನ್ನು ನೀಡಿ.

ಧನುಸ್ಸು

ಇದು ರಾಶಿ ಚಕ್ರದ ಒಂಭತ್ತನೆಯ ರಾಶಿಯಾಗಿದ್ದು, ಈ ತಿಂಗಳ‌ ಮೊದಲ ವಾರದಲ್ಲಿ ಮಿಶ್ರಫಲವಿದೆ. ಶುಕ್ರನು ನಿಮ್ಮ ರಾಶಿಗೆ ಬರಲಿದ್ದಾನೆ. ಪ್ರೇಮವು ಆರಂಭವಾಗಬಹುದು. ಕುಜನು ನೀಚನಾದ ಕಾರಣ ಗುರುಬಲವೂ ಇಲ್ಲದೇ ಇರುವುದರಿಂದ ಪೂರ್ವಾಪರ ಯೋಚನೆ ಇಲ್ಲದೇ ಹೊಂಡಕ್ಕೆ ಬೀಳಬೇಕಾಗಬಹುದು. ಮನೆಯವರೂ ಎಚ್ಚರಿಕೆಯಿಂದ ಇರುವುದು ಸೂಕ್ತ. ನಂತರ ದುಃಖಿಸಿದರೆ ಪ್ರಯೋಜನವಿಲ್ಲ. ಮಹಾಶಿವನು ಇಂತಹ ಆಸ್ಥಾನದಲ್ಲಿ ಪ್ರೇಮವು ಬಾರದಂತೆ ಕಾಪಾಡುವನು.

ಮಕರ

ಈ ರಾಶಿಯವರಿಗೆ ನವೆಂಬರ್ ಮೊದಲ ವಾರದಲ್ಲಿ ಅಶುಭವಿದೆ.‌ ಶುಕ್ರನು ದ್ವಾದಶ ಸ್ಥಾನಕ್ಕೆ ಬರಲಿದ್ದು ವಾಹನದಿಂದ ಭೀತಿ ಅಥವಾ ವಾಹನದ ಕಾರಣದಿಂದ ನಷ್ಟ ಮಾಡಿಸುವನು. ವ್ಯಾಪಾರಿಗಳಿಗೆ ಅಲ್ಪ ಹಿನ್ನಡೆಯಾಗಲಿದೆ. ಭೂಮಿಯ ವ್ಯವಹಾರಸ್ಥರು ಎಚ್ಚರಿಕೆಯಿಂದ ಕಾರ್ಯವನ್ನು ಮಾಡಬೇಕು. ನಿಮ್ಮ ಮೇಲೆ ಎಲ್ಲ ಆರೋಪಗಳೂ ಬರಬಹುದು. ಭೂವರಾಹ ಸ್ತೋತ್ರವನ್ನು ನಿತ್ಯ ಜಪಿಸಿ.

ಕುಂಭ

ರಾಶಿ ಚಕ್ರದ ಹನ್ನೊಂದನೇ ರಾಶಿಯವರಿಗೆ ಶುಕ್ರನು ಏಕಾದಶಕ್ಕೆ ಬರುವುದರಿಂದ ಕೆಲವು ಅನುಕೂಲಗಳು ಕಾಣಿಸುವುವು. ಮುಖ್ಯವಾಗಿ ಶತ್ರುಗಳಿಂದ ನಿಮಗೆ ಬರಬೇಕಾದ ಹಣ ಅಥವಾ ವಸ್ತು, ಭೂಮಿ ಬರುವುದು. ಸಾಲ ಪಡೆದವರೂ ನಿಮಗೆ ಅಚ್ಚರಿಯಾಗುವಂತೆ ಮರಳಿ ಹಣವನ್ನು ಕೊಡುವರು. ಬುಧನು ದಶಮದಲ್ಲಿ ಇರುವ ಕಾರಣ ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಸಾಧ್ಯವಾಗುವುದು. ಲಕ್ಷ್ಮೀನೃಸಿಂಹ ಸ್ತೋತ್ರವನ್ನು ಪಠಿಸಿ.

ಮೀನ

ಈ ವಾರದಲ್ಲಿ ಶುಕ್ರನ ಪರಿವರ್ತನೆ ಆಗುವುದು. ದಶಮದಲ್ಲಿ ಶುಕ್ರನು ಇರುವನು. ‌ಉದ್ಯೋಗದಲ್ಲಿ ಕಲಾತ್ಮಕತೆಯನ್ನು ರೂಢಿಸಿಕೊಳ್ಳುವಿರಿ. ಕಲಾವಿದರು, ವ್ಯಾಪಾರಿಗಳಿಗೆ ದೊಡ್ಡ ಮಟ್ಟದ ಆದಾಯ ಹೆಚ್ಚಲಿದೆ. ಪೃಥ್ವಿಯ ಉತ್ಪನ್ನದ ವ್ಯಾಪಾರದಲ್ಲಿ ಪ್ರಗತಿ ಕಾಣಿಸುವುದು. ಆದರೆ ಕುಜನು ಬಲಹೀನನಾದ ಕಾರಣ ಸುಬ್ರಹ್ಮಣ್ಯನ ಉಪಾಸನೆಯಿಂದ ಮುಂದುವರಿದರೆ ಉತ್ತಮ.

ದಿನ ಭವಿಷ್ಯ… 03-11-2024,‌ ಭಾನುವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

ಶನಿ, ಗುರು, ಬುಧನ ಹಿಮ್ಮುಖ ಚಲನೆ: ಈ 3 ರಾಶಿಯವರಿಗೆ ನವೆಂಬರ್‌ನಲ್ಲಿ ಭಾರೀ‌ ಸಂಕಷ್ಟ

TAGGED:body strength decline this week: Meditate on MarsMental strengthSurya
Share This Article
Facebook Twitter Copy Link Print
Previous Article ಪರ ಪುರುಷನೊಂದಿಗಿದ್ದಾಗಲೇ ಗಂಡನ ಕೈಗೆ ತಗ್ಲಾಕೊಂಡ ಹೆಂಡ್ತಿ! ವಿಡಿಯೋ ನೋಡಿ
Next Article ಮನೆಯಲ್ಲಿ ಇಲಿಗಳು ಓಡಾಡ್ತಿವೆಯಾ? ಈ ಟ್ರಿಕ್ಸ್‌ ಯೂಸ್ ಮಾಡಿ!

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪಂಚಾಂಗಆಲಾಪ

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read

Social Networks

Facebook-f Instagram Twitter
Welcome Back!

Sign in to your account

Lost your password?