newsics.com
ದೀಪಾವಳಿ ಹಬ್ಬದ ಸಂದರ್ಭದಲ್ಲಿ 100-500 ರೂಪಾಯಿ ನೋಟುಗಳನ್ನ ಒಂದೆಡೆ ಹಾಕಿ, ಬೆಂಕಿ ಹಚ್ಚಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಕಣ್ಣೆದುರೇ ಆ ನೋಟುಗಳೆಲ್ಲ ಸುಟ್ಟು ಭಸ್ಮವಾಗಿವೆ. ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊ ವೈರಲ್ ಆಗಿದ್ದು, ಅದನ್ನ ನೋಡಿದವರು ಛೀಮಾರಿ ಹಾಕುತ್ತಿದ್ದಾರೆ. ಹಣವನ್ನ ಸುಟ್ಟವನು ಶತಮೂರ್ಖ, ತಲೆಯಲ್ಲಿ ಬುದ್ಧಿಯಿಲ್ಲದವನು ಎಂದೆಲ್ಲ ಬೈಯುತ್ತಿದ್ದಾರೆ. ಅಷ್ಟೇ ಅಲ್ಲ, ಆ ವಿಡಿಯೊ ಮಾಡಿದವರು ಯಾರು?, ಹಣಕ್ಕೆ ಬೆಂಕಿ ಕೊಡುವವನನ್ನ ತಡೆಯುವುದನ್ನ ಬಿಟ್ಟು, ಅದನ್ನ ವಿಡಿಯೊ ರೆಕಾರ್ಡ್ ಮಾಡಿದ್ದೀರಲ್ಲ ಎಂದೂ ಕಮೆಂಟ್ ಹಾಕಿದ್ದಾರೆ.
ನೋಟುಗಳನ್ನ ಸುಟ್ಟು, ಭಸ್ಮ ಮಾಡಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಮೆಂಟ್ ಸೆಕ್ಷನ್ನಲ್ಲಿ ಒಂದಷ್ಟು ಜನರು ಬಾಯಿಗೆ ಬಂದಂತೆ ಬೈದರೆ, ಇನ್ನೊಂದಷ್ಟು ಜನರು ಇದು ʼಫನ್ʼ ಎನ್ನುತ್ತಿದ್ದಾರೆ. ತುಂಬ ಫನ್ನಿಯಾದ ವಿಡಿಯೊ ಎಂದು ಹೇಳುತ್ತಿದ್ದಾರೆ. ಆದರೆ ಇದು ಫೇಕ್ ಕರೆನ್ಸಿ ನೋಟುಗಳು ಎಂದೂ ಹೇಳಲಾಗುತ್ತಿದೆ. ಒರಿಜಿನಲ್ ನೋಟುಗಳನ್ನೆಲ್ಲ ಹೀಗೆ ಯಾರು ಸುಡುತ್ತಾರೆ. ವಿಡಿಯೊ ಮಾಡುವುದಕ್ಕೋಸ್ಕರ, ಬೇಕೆಂದೇ ಹೀಗೆ ನಕಲಿ ನೋಟುಗಳನ್ನ ಸುಟ್ಟಿದ್ದಾರೆ ಎನ್ನಲಾಗ್ತಿದೆ.