Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಹಬ್ಬದ ವೇಳೆಯಲ್ಲೂ ಕಾರು ಕೊಳ್ಳುವವರಿಲ್ಲ! ಮಾರಾಟದಲ್ಲಿ ಭಾರೀ ಕುಸಿತ, ಏನು ಕಾರಣ?
ದೇಶಪ್ರಮುಖ

ಹಬ್ಬದ ವೇಳೆಯಲ್ಲೂ ಕಾರು ಕೊಳ್ಳುವವರಿಲ್ಲ! ಮಾರಾಟದಲ್ಲಿ ಭಾರೀ ಕುಸಿತ, ಏನು ಕಾರಣ?

Share
3 Min Read
SHARE

newsics.com

ದೀಪಾವಳಿ ಹಬ್ಬದ ಸಂದರ್ಭದಲ್ಲೂ ದೇಶದಲ್ಲಿ ಕಾರುಗಳ ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದೆ.

ಹಬ್ಬದ ಹಿನ್ನೆಲೆಯಲ್ಲಿ ಜನರು ಮುಗಿಬಿದ್ದು, ಕಾರುಗಳ ಖರೀದಿಗೆ ಬುಕ್ಕಿಂಗ್ ಮಾಡಲಿದ್ದಾರೆ ಎಂಬ ಕಂಪನಿಗಳ ಮತ್ತು ಬ್ಯಾಂಕ್‌ಗಳ ಲೆಕ್ಕಾಚಾರ ತಲೆಕೆಳಗಾಗಿದೆ.

7.90 ಲಕ್ಷ ವಾಹನಗಳು ಮಾರಾಟಕ್ಕೆ ಸಿದ್ಧವಿದ್ದರೂ, ಬುಕಿಂಗ್ ಮಾಡುವವರೇ ಇಲ್ಲವಾಗಿದೆ. ಹಬ್ಬದ ಸಂದರ್ಭಗಳಲ್ಲಿ ಬ್ಯುಸಿಯಾಗಿರುತ್ತಿದ್ದ ಶೋರೂಂಗಳು ಬಿಕೋ ಎನ್ನುತ್ತಿವೆ.

ಅಕ್ಟೋಬರ್ ಅಂತ್ಯದ ದೀಪಾವಳಿ ಮತ್ತು ನವೆಂಬರ್‌ನಲ್ಲಿನ ಮದುವೆ ಸೀಸನ್‌ಗಳಿಂದ ಕಾರುಗಳಿಗೆ ಭಾರೀ ಬೇಡಿಕೆ ಬರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಮಾರುತಿ ಸುಝುಕಿ, ಹುಂಡೈ ಸೇರಿದಂತೆ ಪ್ರಮುಖ ಕಂಪನಿಗಳ ಕಾರುಗಳ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ. ಮಾರುಕಟ್ಟೆಯಲ್ಲಿ ಹಬ್ಬದ ವೇಳೆ ಆದ ಬದಲಾವಣೆಗೆ ಕಾರಣ ಏನು ಎಂದು ಕಂಪನಿಗಳು ತಲೆಕೆಡಿಸಿಕೊಂಡಿವೆ.

ಲಕಾರುಗಳ ಖರೀದಿಯಲ್ಲಿ ಕೊಂಚ ಇಳಿಕೆಯಾಗಿದೆ ಎಂದು ಟಾಟಾ ಮೋಟಾರ್ಸ್ ಒಪ್ಪಿಕೊಂಡಿದೆ. ಅಂಕಿ ಅಂಶಗಳ ಪ್ರಕಾರ, ಈ ವರ್ಷದ ಅಕ್ಟೋಬರ್ ಅಂತ್ಯಕ್ಕೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಸೇರಿ 82,682 ಯೂನಿಟ್ ಮಾರಾಟವಾಗಿದೆ. ಕಳೆದ ವರ್ಷ ಇದೇ ತಿಂಗಳ ಅವಧಿಯಲ್ಲಿ ಮೋಟಾರ್ಸ್‌ 82,954 ಕಾರುಗಳನ್ನು ಮಾರಾಟ ಮಾಡಿತ್ತು.

ಆದರೆ ಹುಂಡೈ ಕಂಪನಿ ಪ್ರಕಾರ, ಕಾರುಗಳ ಮಾರಾಟ ಕೊಂಚ ಏರಿಕೆ ಕಂಡಿದೆ. ಅಕ್ಟೋಬರ್‌ನಲ್ಲಿ 70,078 ಯೂನಿಟ್ ಮಾರಾಟವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 68,728 ಯೂನಿಟ್ ಮಾರಾಟವಾಗಿತ್ತು. ದೇಶೀಯ ಮಾರಾಟ 2023ರ ಅಕ್ಟೋಬರ್‌ನಲ್ಲಿ 55,128 ಇತ್ತು. ಈ ವರ್ಷ 55,568ಕ್ಕೆ ಏರಿಕೆಯಾಗಿದೆ. ರಫ್ತಿನಲ್ಲಿ ಶೇ 6.7ರಷ್ಟು ಏರಿಕೆಯಾಗಿದೆ ಎಂದು ಕಂಪನಿ ಹೇಳಿದೆ.

ವಾಹನ ವಿತರಕ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಮಾಹಿತಿ ಪ್ರಕಾರ, ಕಡಿಮೆ ಮಾರಾಟ ದರ ದಾಖಲಾಗಿದ್ದಾಗಲೂ ಕಂಪನಿಗಳು ಅತಿ ಹೆಚ್ಚು ವಾಹನ ಉತ್ಪಾದನೆ ಮಾಡಿವೆ. ಆದ್ದರಿಂದ ಕಾರುಗಳ ಮಾರಾಟ ಒಟ್ಟಾರೆಯಾಗಿ 18.81ರಷ್ಟು ಕುಸಿತವನ್ನು ಕಂಡಿದೆ. ಕೋವಿಡ್ ಪರಿಸ್ಥಿತಿಯ ನಂತರ ಕಾರುಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿತ್ತು. ಆದರೆ ಈಗ 10-25 ಲಕ್ಷ ರೂ. ತನಕದ ಕಾರುಗಳ ಮಾರಾಟದಲ್ಲಿ ಕುಸಿತ ಉಂಟಾಗಿದೆ.

ಈ ವರ್ಷದ ಆರಂಭದಲ್ಲಿ ಲೋಕಸಭೆ ಚುನಾವಣೆಯ ಕಾರಣ ಆರ್ಥಿಕ ಚಟುವಟಿಕೆಗಳು ಕಡಿಮೆಯಾಗಿತ್ತು. ಅಲ್ಲದೇ ಹವಾಮಾನ ವೈಪರೀತ್ಯದ ಕಾರಣ ಜನರು ಕಾರುಗಳನ್ನು ಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಲ್ಲದೇ ಎಲೆಕ್ಟ್ರಿಕಲ್/ ಡೀಸೆಲ್ & ಪೆಟ್ರೋಲ್ ಕಾರುಗಳ ಗೊಂದಲದ ಕಾರಣ ಜನರು ಯಾವುದನ್ನು ಖರೀದಿಸಬೇಕು ಎಂಬ ಗೊಂದಲದಲ್ಲಿದ್ದು ಖರೀದಿಯನ್ನು ಮುಂದೂಡಿಕೆ ಮಾಡಿದ್ದಾರೆ.

ಹೆಚ್‌ಎಂಐಎಲ್‌ನ ಮುಖ್ಯ ಆಡಳಿತ ವ್ಯವಸ್ಥಾಪಕ ತರುಣ್ ಗಾರ್ಗ್‌ ಮಾತನಾಡಿ, ಎಸ್‌ಯುವಿ ಮಾದರಿಯ ಕಾರುಗಳಿಗೆ ಭಾರೀ ಬೇಡಿಕೆ ಇದೆ. 37,902 ಎಸ್‌ಯುವಿ, ದೇಶೀಯವಾಗಿ 17,497 ಹುಡೈ ಕೆರ್ಟಾ ಮಾದರಿ ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಹೇಳಿದ್ದಾರೆ.

ಪ್ರಯಾಣಿಕ ವಾಹನಗಳ ಖರೀದಿ ಎಲೆಕ್ಟ್ರಿಕ್ ವಾಹನ ಸೇರಿದಂತೆ 48,637 ರಿಂದ 48,423 ಯೂನಿಟ್‌ಗೆ ಕುಸಿದಿದೆ ಎಂದು ಅಂದಾಜಿಸಲಾಗಿದೆ. ವಾಣಿಜ್ಯ ವಾಹನಗಳ ಖರೀದಿ 2023ರ ಅಕ್ಟೋಬರ್‌ನಲ್ಲಿ 34,317 ಇತ್ತು. ಈ ವರ್ಷ 34,259 ಯೂನಿಟ್ ಆಗಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.

ಎಂಜಿ ಮೋಟಾರ್ಸ್‌ ಈ ವರ್ಷ ಶೇ 31ರಷ್ಟು ಕಾರುಗಳ ಮಾರಾಟ ಏರಿಕೆಯಾಗಿದೆ ಎಂದು ಶುಕ್ರವಾರ ಹೇಳಿತ್ತು. ಅಕ್ಟೋಬರ್‌ನಲ್ಲಿ 7045 ಯೂನಿಟ್ ಕಾರುಗಳನ್ನು ಮಾರಾಟವಾಗಿವೆ ಎಂದು ತಿಳಿಸಿತ್ತು. ಹೊಸದಾಗಿ ಮಾರುಕಟ್ಟೆಗೆ ಬಂದ ವಿಂಡ್ಸರ್ ಒಂದೇ ತಿಂಗಳಿನಲ್ಲಿ 3,116 ಯೂನಿಟ್ ಮಾರಾಟವಾಗಿದೆ ಎಂದು ತಿಳಿಸಿದೆ.

ಕಾರುಗಳ ಖರೀದಿಗೆ ನೀಡುವ ಬ್ಯಾಂಕ್ ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿವೆ. ಆದ್ದರಿಂದ ಸಾಲ ಮಾಡಿ ಕಾರು ಖರೀದಿ ಮಾಡುವ ಜನರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ.

2025ರಲ್ಲಿ ಕಾರುಗಳ ದರಗಳಲ್ಲಿ ಇಳಿಕೆ ಕಂಡುಬರಲಿದೆ. ಆಗ ಖರೀದಿ ಮಾಡೋಣ ಎಂದು ಜನರು ತಮ್ಮ ಆಲೋಚನೆಯನ್ನು ಮುಂದಿನ ವರ್ಷಕ್ಕೆ ಬದಲಾವಣೆ ಮಾಡಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಭಾರತ ಮಾತ್ರವಲ್ಲ ವಿಶ್ವದ ವಿವಿಧ ರಾಷ್ಟ್ರಗಳಲ್ಲೂ ಕಾರುಗಳ ಖರೀದಿ ಇಳಿಕೆಯಾಗಿದೆ. ಇದು ಉತ್ಪಾದನೆ ಮೇಲೆಯೂ ಪ್ರಭಾವ ಬೀರಿದೆ. ವೋಕ್ಸ್ ವ್ಯಾಗನ್ ಬೆಲ್ಜಿಯಂನ ಬ್ರುಸೆಲ್ಸ್‌ನಲ್ಲಿರುವ ಉತ್ಪಾದನಾ ಘಟಕವನ್ನು ಮುಚ್ಚಲಾಗುತ್ತದೆ ಎಂದು ಕೆಲವು ದಿನಗಳ ಹಿಂದೆ ಹೇಳಿತ್ತು.

ಅಮೆರಿಕ, ಕೆನಡಾ, ಯುರೋಪ್ ರಾಷ್ಟ್ರಗಳಲ್ಲಿ ಕಾರುಗಳ ಖರೀದಿ ಕಡಿಮೆಯಾಗುತ್ತಿದೆ. ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದ ಆರ್ಥಿಕ ಪರಿಸ್ಥಿತಿ ಬದಲಾಗಿದ್ದು, ಜನರು ಹೂಡಿಕೆ ಮಾಡಲು ಮುಂದಾಗುತ್ತಿಲ್ಲ.

ಪ್ರಚಾರದ ವೇಳೆ ಬೈಕ್‌ನಿಂದ ಬಿದ್ದ ನಿಖಿಲ್‌ ಕುಮಾರಸ್ವಾಮಿ

ಕಡಿಮೆಯಾಯ್ತು ರೈಲ್ವೆ ಟಿಕೆಟ್ ರಿಸರ್ವೇಷನ್ ಅವಧಿ, ಬದಲಾಗಲಿದೆ SBI, ICICI ಕ್ರೆಡಿಟ್ ಕಾರ್ಡ್ ನಿಯಮ

ವಕ್ಫ್ ನೋಟಿಸ್ ತಕ್ಷಣ ಹಿಂಪಡೆಯಲು ಸಿಎಂ ಸೂಚನೆ, ಪಹಣಿ ತಿದ್ದುಪಡಿ ರದ್ದತಿಗೂ ಆದೇಶ

TAGGED:There are no car buyers even during the festival! Huge decline in saleswhat is the reason?
Share This Article
Facebook Twitter Copy Link Print
Previous Article ಎಕ್ಸ್‌ಪ್ರೆಸ್ ರೈಲು ಡಿಕ್ಕಿ: ನಾಲ್ವರ ಸಾವು
Next Article ರಷ್ಯಾ ಬೆಂಬಲಿಸಿದ ಭಾರತದ 19 ಕಂಪನಿ ಮೇಲೆ ಅಮೆರಿಕ ನಿರ್ಬಂಧ: ಭಾರತ ಹೇಳಿದ್ದೇನು?

Popular Posts

Puri Jaganath ಪುರಿ ಜಗನ್ನಾಥನ ಪ್ರಸಾದ ಆನ್‌ಲೈನ್‌ನಲ್ಲಿ ಸಿಗುತ್ತೆ ಅನ್ನೋ ಭ್ರಮೆಯಲ್ಲಿದ್ದೀರಾ? ಸೈಬರ್ ವಂಚಕರ ಬಗ್ಗೆ ಇರಲಿ ಎಚ್ಚರ

2 Min Read

Bigg Boss ಕಿರುತೆರೆಯಲ್ಲಿ ಹೊಸ ಇತಿಹಾಸ; ಸೆಪ್ಟೆಂಬರ್‌ನಿಂದ ಕನ್ನಡ ಸೇರಿ 6 ಭಾಷೆಗಳ ‘ಬಿಗ್ ಬಾಸ್’ ಒಟ್ಟಿಗೆ ಆರಂಭ

2 Min Read

Harassment Case ಮಹಿಳಾ IPS ಅಧಿಕಾರಿಗೆ ಟಾರ್ಚರ್..! ಮೈಮೇಲೆ ಕಾಂಡೋಮ್ ಎಸೆದು ಬ್ಲ್ಯಾಕ್‌ಮೇಲ್ ಮಾಡಿದ ಸಹೋದ್ಯೋಗಿ

2 Min Read

Funeral of Chennamma ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ

1 Min Read

You Might Also Like

ಕರ್ನಾಟಕಪ್ರಮುಖ

Major transfer ಗಣಿ ಇಲಾಖೆಗೆ ಮೇಜರ್ ಸರ್ಜರಿ! 160 ಅಧಿಕಾರಿಗಳ ವರ್ಗಾವಣೆ!

2 Min Read
ಪ್ರಮುಖಆರೋಗ್ಯ

Microplastics In Blood ನಿಮ್ಮ ರಕ್ತದಲ್ಲೂ ಇರಬಹುದು ಪ್ಲಾಸ್ಟಿಕ್ ಕಣ..! ಹಾರ್ಟ್ ಅಟ್ಯಾಕ್ ರೋಗಿಗಳ ರಕ್ತದಲ್ಲಿ ಪತ್ತೆಯಾಯ್ತು ಮೈಕ್ರೋಪ್ಲಾಸ್ಟಿಕ್

2 Min Read
ಪ್ರಮುಖದೇಶ

First Dengue Vaccine ಡೆಂಗ್ಯೂ ಕಾಟಕ್ಕೆ ಇನ್ಮುಂದೆ ಗುಡ್‌ಬೈ; ದೇಶದ ಮೊದಲ ‘QDENGA’ ಲಸಿಕೆಗೆ ಡಿಸಿಜಿಐ ಗ್ರೀನ್ ಸಿಗ್ನಲ್

1 Min Read
ಪ್ರಮುಖಕರ್ನಾಟಕ

Rain Alert ಮುಂದುವರಿದ ವರುಣನ ಆರ್ಭಟ; ನಾಳೆ ರಾಜ್ಯಕ್ಕೆ ‘ಯೆಲ್ಲೋ ಅಲರ್ಟ್’ ಘೋಷಣೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?