newsics.com
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರಲ್ಲಿ ದಿನದಿಂದ ದಿನಕ್ಕೆ ಬದಲಾವಣೆಗಳು ಕಾಣುತ್ತಿವೆ. ಸೀಸನ್ 1ರಿಂದ 10ರವೆರೆಗೂ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಬಿಗ್ಬಾಸ್ ಮೂಡಿ ಬರುತ್ತಿತ್ತು. ಆದ್ರೆ, ತಾಯಿಯ ಅಗಲಿಕೆಯ ದುಃಖದಲ್ಲಿರೋ ಕಿಚ್ಚ ಈ ವಾರ ಬಿಗ್ಬಾಸ್ ಶೋ ಹೋಸ್ಟ್ ಮಾಡ್ತಿಲ್ಲ.
ಹೌದು, ಇತ್ತೀಚಿಗಷ್ಟೇ ತಾಯಿಯನ್ನ ಕಳೆದುಕೊಂಡಿರೋ ಕಿಚ್ಚ. ಇದೇ ನೋವಲ್ಲಿದ್ದಾರೆ. ಹೀಗಾಗಿ ಎರಡು ದಿನದ ಬಿಗ್‌ಬಾಸ್‌ನ ಯೋಗರಾಜ್ ಭಟ್. ಸೃಜನ್ ಲೋಕೇಶ್ ಹೋಸ್ಟ್ ಮಾಡ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶನಿವಾರದ ಎಪಿಸೋಡ್‌ನ ನಿರ್ದೇಶಕ ಯೋಗರಾಜ್ ಭಟ್ ನಡೆಸಿಕೊಡಲಿದ್ದಾರೆ. ಭಾನುವಾರದ ಎಪಿಸೋಡ್‌ನ್ನ ನಟ ಸೃಜನ್ ಲೋಕೇಶ್ ನಡೆಸಿಕೊಡಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಕಿಚ್ಚ ಸುದೀಪ್ ಅವರು ಅನುಪಸ್ಥಿತಿಯಲ್ಲಿ ಅವರ ಜಾಗಕ್ಕೆ ಈ ಇಬ್ಬರು ಸೆಲೆಬ್ರೆಟಿಗಳು ವೀಕೆಂಡ್ ಶೋ ನಡೆಸಿಕೊಡ್ತಿದ್ದಾರೆ ಎನ್ನಲಾಗಿದೆ.
ಇನ್ನು ಬಿಗ್ ಬಾಸ್’ನಲ್ಲಿ ಪ್ರತಿ ವಾರವೂ ಎಲಿಮಿನೇಷನ್ ನಡೆದೇ ನಡೆಯುತ್ತದೆ. ಆದ್ರೆ,ಬಿಗ್ ಬಾಸ್ ಆರಂಭ ಆಗಿ ತಿಂಗಳು ಕಳೆದರೂ ಸರಿಯಾಗಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿದ್ದು ಒಂದು ಬಾರಿ ಮಾತ್ರ. ಯಮುನಾ ಶ್ರೀನಿಧಿ ಅವರು ಎಲಿಮಿನೇಟ್ ಆದರು. ಆ ಬಳಿಕ ಜಗದೀಶ್ ಹಾಗೂ ರಂಜಿತ್ ಕಿರಿಕ್ ಮಾಡಿಕೊಂಡು ಎಲಿಮಿನೇಟ್ ಆದರು. ಈ ವಾರ ನಾನಾ ರೀತಿಯ ಚಟುವಟಿಕೆ ನೀಡಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಬಹುದು ಎನ್ನಲಾಗಿದೆ.