newsics.com
ದಾವಣಗೆರೆ: ಅಹಿಂಸಾ ಪರಮೋಧರ್ಮವೇ ಬೇಕು ಎಂದು ಮದುವೆಯ ವಯಸ್ಸಲ್ಲಿ ಇಬ್ಬರು ಯುವತಿಯರು ಸನ್ಯಾಸತ್ವ ಸ್ವೀಕಾರ ಮಾಡಿದ್ದಾರೆ. ಜೈನ ದೀಕ್ಷೆ ಪಡೆಯುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಅದ್ಧೂರಿ ಸಮಾರಂಭ ಆಯೋಜಿಸಲಾಗಿತ್ತು.
ಮಾನಸಿ ಕುಮಾರಿ, ಭಕ್ತಿ ಕುಮಾರಿ ಈ ಇಬ್ಬರು ಜೈನ ದೀಕ್ಷೆ ಪಡೆಯಲು ನಿರ್ಧಾರ ಮಾಡಿದ್ದಾರೆ. ದಾವಣಗೆರೆಯ ಮಾನಸಿ ಕುಮಾರಿ MA ಸೈಕಾಲಜಿ ಮಾಡಿದ್ರೆ, ಗೋಕಾಕ್‌ನ ಭಕ್ತಿ ಕುಮಾರಿ ಬಿಎ, ಎಲ್ಎಲ್ಬಿ ಮಾಡಿದ್ದಾರೆ. ಸದ್ಯ ಇಬ್ಬರೂ 26 ನೇ ವಯಸ್ಸಿಗೆ ಲೌಕಿಕ ಜೀವನ ತೊರೆದು ಅಲೌಕಿಕ ಜೀವನದ ಕಡೆ ಮುಖ ಮಾಡಿದ್ದಾರೆ.
ನವೆಂಬರ್ 17ಕ್ಕೆ ಜಾರ್ಖಂಡ್ನಲ್ಲಿ ಮಾನಸಿ ಕುಮಾರಿ, ಭಕ್ತಿ ಕುಮಾರಿ ಅವರ ಸನ್ಯಾಸತ್ವ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಪರಮಪೂಜ್ಯ ಆಚಾರ್ಯ ಶ್ರೀ ಮುಕ್ತಿ ಪ್ರಭು ಸುರೀಶ್ವರ್ ಜೀ ಮಹಾರಾಜರ ಹಾಗೂ ಪರಮ ಪೂಜ್ಯ ಸಾಧವಿ ಶ್ರೀ ಪೂರ್ಣಪ್ರಜ್ಞ ಶ್ರೀ ಜಿ ಮಹಾರಾಜ ಸಾಹೇಬ ಸಮ್ಮುಖದಲ್ಲಿ ರುಜುಬಾಲಿಕಾ ತೀರ್ಥಕ್ಷೇತ್ರದಲ್ಲಿ ಜೈನ ಸನ್ಯಾಸತ್ವ ದೀಕ್ಷೆಯನ್ನು ಸ್ವೀಕರಿಸಲಿದ್ದಾರೆ.