newsics.com
ಬೆಂಗಳೂರು: ತಾಯಿ ನಿಧನದಿಂದ ಕಿಚ್ಚ ಸುದೀಪ್ ದುಃಖದಲ್ಲಿದ್ದಾರೆ. ನಟ ಮಗಳು ಸಾನ್ವಿ ಸುದೀಪ್ ಕೂಡ ನೋವಿನಲ್ಲಿದ್ದಾರೆ. ಪ್ರೀತಿಯ ಅಜ್ಜಿಯ ನಿಧನ ದಿನ ಕೆಲವರ ಅತಿರೇಕ ವರ್ತನೆ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಸುದೀಪ್ ತಾಯಿ ನಿಧನದ ಸುದ್ದಿ ಕೇಳಿ ಸಾವಿರಾರು ಜನರು ಸುದೀಪ್ ಮನೆ ಮುಂದೆ ಜಮಾಯಿಸಿದ್ದರು. ಕೆಲವರು ಫೋಟೋ, ವಿಡಿಯೋಗಳಿಗಾಗಿ ಮಾಡಿದ ಹುಚ್ಚಾಟಕ್ಕೆ ಸಾನ್ವಿ ಸಿಟ್ಟಾಗಿದ್ದಾರೆ.
ಇಂದು ನಮ್ಮ ಕುಟುಂಬಕ್ಕೆ ತುಂಬಾ ಕಷ್ಟದ ದಿನವಾಗಿತ್ತು. ನಮ್ಮ ಮನೆ ಮುಂದೆ ಸೇರಿದ್ದ ಜನರು ಜೋರಾಗಿ ಕಿರುಚುತ್ತಿದ್ರು. ನಮ್ಮ ಮುಖಕ್ಕೆ ಕ್ಯಾಮೆರಾ ಇಡಲು ಕಷ್ಟಪಡ್ತಿದ್ರು. ಕೆಲವರು ಮನುಷ್ಯತ್ವ ಇಲ್ಲದವರಂತೆ ನಡೆದುಕೊಂಡಿದ್ದಾರೆ. ನನ್ನ ತಂದೆ ಅವರ ತಾಯಿಗಾಗಿ ಕಣ್ಣೀರು ಹಾಕ್ತಿದ್ರು. ಆದ್ರೆ ಜನರು ನಮ್ಮನ್ನು ತಳ್ಳಿ-ನೂಕಿದ್ದಾರೆ ಎಂದು ಸಾನ್ವಿ ಬರೆದಿದ್ದಾರೆ.