newsics.com
ಬೈರುತ್: ಲೆಬನಾನ್ ದಕ್ಷಿಣ ನಗರದ ನಬಾಟಿಯೆಹ್‌ನಲ್ಲಿ ಮುನ್ಸಿಪಲ್ ಕಟ್ಟಡಗಳ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಹೆಜ್ಬುಲ್ಲಾ ಮತ್ತು ಅದರ ಮಿತ್ರ ಅಮಲ್ ಅಧಿಕಾರವನ್ನು ತನ್ನ ಕೈಯಲ್ಲಿ ಹಿಡಿದಿಟ್ಟುಕೊಂಡಿದ್ದು ಮೃತಪಟ್ಟವರಲ್ಲಿ ಮೇಯರ್ ಕೂಡ ಇದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಬತಿಯೆಹ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಒಂದು ರೀತಿಯ ಬೆಂಕಿಯ ಬಲೆಯಂತಾಗಿದೆ. ಅಲ್ಲಿ 11 ಬಾರಿ ವಾಯುದಾಳಿ ನಡೆಸಲಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದರು. ಅಲ್ಲದೆ ನಾಗರಿಕರ ರಕ್ಷಣೆಗಾಗಿ ವಿಶ್ವಸಂಸ್ಥೆ ಮಧ್ಯೆಪ್ರವೇಶಿಸಬೇಕು ಎಂದು ಮನವಿ ಮಾಡಿದರು. ಇನ್ನು ಲೆಬನಾನ್‌ನ ಪ್ರಧಾನ ಮಂತ್ರಿ, ಈ ದಾಳಿಯು ನಗರದ ಮುನ್ಸಿಪಲ್ ಕೌನ್ಸಿಲ್‌ನ ಸಭೆಯನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದರು.