newsics.com
ಕನ್ನಡ ಚಿತ್ರರಂಗದಲ್ಲಿ ನಟನಾಗಿ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡು ಚೌಕ, ಕಾಟೇರ, ರಾಬರ್ಟ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಖ್ಯಾತ ಖಳನಟ ಸುಧೀರ್ ಪುತ್ರ ತರುಣ್ ಸುಧೀರ್ ಇಂದು ಅಕ್ಟೋಬರ್ 9 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಹೌದು, ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಗೆ ಇಂದು ಬರ್ತ್ಡೇ ಸಂಭ್ರಮ. ಹೀಗಾಗಿ ಪತ್ನಿ ಸೋನಾಲ್ ಮೊಂಥೇರೋ ಸ್ವೀಟ್ ಆಗಿ ಹನಿಮೂನ್ ಫೋಟೋಸ್ ಶೇರ್ ಮಾಡಿ ಬರ್ತ್ಡೇ ಶುಭಾಶಯಗಳನ್ನು ತಿಳಿಸಿದ್ದಾರೆ
ಜಗತ್ತಿನ ಅತಿ ಹೆಚ್ಚು ಪ್ರೀತಿಸುವ, ಕಾಳಜಿ ತೋರಿಸುವ, ಕರುಣೆಯ ಮನಸಿರುವಂತಹ ಗಂಡನಿಗೆ ಬರ್ತ್ಡೇ ಶುಭಾಶಯಗಳು. ನನ್ನನ್ನು ಪ್ರತಿದಿನ ಪ್ರೇರೇಪಿಸುವ ಹಾಗೂ ನಾನು ಜೊತೆಯಾಗಿ ನಡೆಯಲು ಬಯಸುವ ವ್ಯಕ್ತಿಗೆ ಜನ್ಮದಿನದ ಶುಭಾಶಯ ಎಂದು ನಟಿ ವಿಶ್ ಮಾಡಿದ್ದಾರೆ.
ನಟಿ ಶೇರ್ ಮಾಡಿದ ಫೋಟೋದಲ್ಲಿ ತರುಣ್ ವೈಟ್ ಡ್ರೆಸ್ ಧರಿಸಿ ಗಾಗಲ್ಸ್ ಧರಿಸಿದ್ದರೆ ಸೋನಾಲ್ ಅವರು ಅರೆಬಿಯನ್ ಸ್ಟೈಲ್ನಲ್ಲಿ ಡ್ರೆಸ್ ಮಾಡಿದ್ದರು. ಅವರ ಸ್ಕಿನ್ ಕಲರ್ ಡ್ರೆಸ್ ಆಕರ್ಷಕವಾಗಿತ್ತು.
ಸ್ಯಾಂಡಲ್ವುಡ್ನ ಮುದ್ದಾದ ಜೋಡಿ ಮರಳು ಭೂಮಿಯಲ್ಲಿ ಸೂರ್ಯಾಸ್ತವನ್ನು ಎಂಜಾಯ್ ಮಾಡಿದ್ದಾರೆ. ಆ ಸಂದರ್ಭದಲ್ಲಿಯೇ ಫೋಟೋ ಸೆರೆ ಹಿಡಿಯಲಾಗಿದೆ.