newsics.com
ಉತ್ತರ ಪ್ರದೇಶ: ತಾಯಿಯೊಬ್ಬಳು ತನ್ನ ನವಜಾತ ಶಿಶುವಿನ ಬಾಯಿಗೆ ಮೆಣಸಿನ ಪುಡಿ ಹಾಕಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ.
ಶಿಶುವಿನ ಬಾಯಿಗೆ ಮೆಣಸಿನಪುಡಿ ಹಾಕುತ್ತಿರುವ ವಿಡಿಯೋವನ್ನು ಮಹಿಳೆಯ ಪತಿಯೇ ವಿಡಿಯೋ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಸತ್ಯೇಂದ್ರ ಕುಮಾರ್ ಎರಡು ವರ್ಷಗಳ ಹಿಂದೆ ಶ್ವೇತಾ ಎಂಬ ಮಹಿಳೆಯನ್ನು ವಿವಾಹವಾಗಿದ್ದರು. ಸ್ವಲ್ಪ ಸಮಯದ ನಂತರ ಶ್ವೇತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಸತ್ಯೇಂದ್ರ ಕುಮಾರ್ ಬಹ್ರೈಚ್‌ನಲ್ಲಿ ಸರ್ಕಾರಿ ಶಿಕ್ಷಕರಾಗಿದ್ದಾರೆ. ಕೆಲಸಕ್ಕೆಂದು ಹೋದಾಗ ಪತ್ನಿ ಮಗುವಿಗೆ ಥಳಿಸುತ್ತಿದ್ದಳು ಎನ್ನಲಾಗಿದೆ. ಪತಿಯ ದೂರಿನ ಮೇರೆಗೆ ಮಂಜನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.