newsics.com
‘ಮುಂಗಾರು ಮಳೆ’ ನಟಿ ಪೂಜಾ ಗಾಂಧಿ ಪತಿ ವಿಜಯ್ ಜೊತೆ ಲಂಡನ್ ಗೆ ಹಾರಿದ್ದಾರೆ.
ಹೌದು, ಮದುವೆಯಾದ ಬಳಿಕ ಪತಿ ಜೊತೆ ಪೂಜಾ ಗಾಂಧಿ ಲಂಡನ್‌ಗೆ ಹಾರಿದ್ದಾರೆ. ಅಲ್ಲಿ ಲಂಡನ್‌ನಲ್ಲಿರುವ 2 ಪ್ರಮುಖ ಕನ್ನಡ ಸಂಸ್ಥೆಗಳಾದ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ಮತ್ತು ಬಸವ ಸಮಿತಿ ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ, ಪೂಜಾ ಗಾಂಧಿ ಅವರು ಬಸವೇಶ್ವರ ಪುತ್ಥಳಿಗೆ ಗೌರವ ಸಲ್ಲಿಸಿದರು.