newsics.com
ಮುಂಬೈ : ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ಬಾಲಿವುಡ್‌ನ ಆದರ್ಶ ದಂಪತಿ ಸಹ ಬ್ರೇಕಪ್ ಮಾಡಿಕೊಂಡಿದ್ದರಂತೆ.
ಜೋಡಿ ತಮ್ಮ ಮೊದಲ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅದಾದ ಸ್ವಲ್ಪ ಸಮಯದ ನಂತರ ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಹೊರಬಿದ್ದಿತ್ತು. ಇದೀಗ ಮದುವೆಯಾಗಿ 12 ವರ್ಷಗಳೇ ಕಳೆದಿವೆ.
ಇತ್ತೀಚಿನ ಸಂದರ್ಶನದಲ್ಲಿ, ಜೆನಿಲಿಯಾ ಡಿಸೋಜಾ ಅವರು ತಮ್ಮ ಪತಿ ರಿತೇಶ್ ದೇಶ್‌ಮುಖ್ ಬಗ್ಗೆ ಬಹಳಷ್ಟು ವಿಷಯಗಳನ್ನು ಬಹಿರಂಗಪಡಿಸಿದ್ದರು.
ನಾವು ಡೇಟಿಂಗ್‌ನಲ್ಲಿರುವಾಗ, ನಾನು ಬೇಗನೆ ಮಲಗುತ್ತಿದ್ದೆ ಮತ್ತು ರಿತೇಶ್ ತಡರಾತ್ರಿಯಲ್ಲಿ ಮಲಗುತ್ತಿದ್ದರು. ಒಂದು ದಿನ ರಾತ್ರಿ 1 ಗಂಟೆ ಸುಮಾರಿಗೆ ರಿತೇಶ್ ನನಗೆ ʼಬ್ರೇಕಪ್ʼ ಎಂದು ಮೆಸೇಜ್ ಕಳುಹಿಸಿದರು. ಹೀಗೆ ಬರೆದು ರಿತೇಶ್ ಮಲಗಿದ್ದರು. ನಾನು ಆ ಮೆಸೇಜ್‌ನ್ನು ನೋಡಿದ್ದು 2:30ರ ಸುಮಾರಿಗೆ. ಓದಿದ ತಕ್ಷಣ ನನಗೆ ಬಹಳಷ್ಟು ನೋವಾಯಿತು.ಇದ್ದಕ್ಕಿದ್ದಂತೆ ಏನಾಯಿತು ಎಂದು ಭಯಪಟ್ಟಿದ್ದೆ” ಎಂದರು
ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ರಿತೇಶ್ ಎದ್ದಾಗ ತಾನು ಏನು ಮೆಸೇಜ್ ಕಳುಹಿಸಿದ್ದೆ ಎಂಬುದು ಕೂಡ ಆತನಿಗೆ ನೆನಪಿರಲಿಲ್ಲ. ಅದು ಆತ ತಮಾಷೆಯಾಗಿ ಬರೆದಿದ್ದನಂತೆ. ನಾನು ಮಾತ್ರ ಬಹಳಷ್ಟು ನೊಂದುಬಿಟ್ಟಿದ್ದೆ” ಎಂದು ಜೆನಿಲಿಯಾ ಹೇಳಿದ್ದಾರೆ.