newsics.com
ಮುಂಬೈ : ಆಕಸ್ಮಿಕವಾಗಿ ಫೈರ್ ಆಗಿದ್ದರಿಂದ ನಟ ಗೋವಿಂದ ಅವರ ಕಾಲಿಗೆ ತೀವ್ರ ಗಾಯ ಆಯಿತು. ನಂತರ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಗೋವಿಂದ ಅವರ ಆರೋಗ್ಯದ ಬಗ್ಗೆ ಆಸ್ಪತ್ರೆಯ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ. ನಟನಿಗೆ 8ರಿಂದ 10 ಹೊಲಿಗೆ ಹಾಕಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಆಸ್ಪತ್ರೆಗೆ ಬಂದು ನಟ ಗೋವಿಂದ ಅವರ ಆರೋಗ್ಯ ವಿಚಾರಿಸಿದ್ದಾರೆ. ಚಿಕಿತ್ಸೆಯ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಗೋವಿಂದ ಸಹೋದರ ಕೀರ್ತಿ ಕುಮಾರ್, ಪುತ್ರಿ ಟೀನಾ ಅಹುಜಾ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಗೋವಿಂದ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.