newsics.com
ಮುಂಬೈ : ಕಾಲಿಗೆ ಗಂಭೀರ ಗಾಯವಾದ್ರೂ ನೋರಾ ಫತೇಹಿ ಐಫಾ ಅವಾರ್ಡ್ ಫಂಕ್ಷನ್ನಲ್ಲಿ ಹಾಟ್ ಐಟಂ ಡಾನ್ಸ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ನಟಿ ತಮ್ಮ ಮುಂಬರುವ ಚಿತ್ರ ಮಟ್ಕಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಅವಘಡ ಸಂಭವಿಸಿ ಪಾದ ಮತ್ತು ಕಾಲಿಗೆ ತೀವ್ರ ಗಾಯವಾಗಿತ್ತು. ಗಾಯಗಳನ್ನು ಸರಿಪಡಿಸಲು ನೋರಾಗೆ ಎರಡು ರೆಸ್ಟ್ ಹೇಳಲಾಗಿತ್ತು. ಫಿಸಿಯೋಥೆರಪಿಸ್ಟ್ ಜೊತೆಗೆ ವೀಡಿಯೊವನ್ನು ಹಂಚಿಕೊಂಡಿದ್ದ ನಟಿ, ವಾರಗಳ ಚಿಕಿತ್ಸೆ ಪಡೆದಿದ್ದೇನೆ. ನನ್ನ ದೇಹದಲ್ಲಿ ಕೆಜಿಗಟ್ಟಲೆ ಅರಿಶಿನ ಸೇರಿದಂತೆ ಪ್ರಪಂಚದ ಎಲ್ಲಾ ನೈಸರ್ಗಿಕ ಉತ್ಪನ್ನಗಳು ಸೇರಿವೆ.
ಸದ್ಯ ಸುಧಾರಿಸಿಕೊಳ್ಳುತ್ತಿದ್ದೇನೆ ಎಂದಿದ್ದರು. ಆದರೆ ಇದರ ನಡುವೆಯೇ, ಐಫಾ ಅವಾರ್ಡ್ ಫಂಕ್ಷನ್ನಲ್ಲಿ ಹಾಟ್ ಡಾನ್ಸ್ ಮಾಡುವ ಮೂಲಕ ವೇದಿಕೆಗೆ ಕಿಚ್ಚು ಹೊತ್ತಿಸಿದ್ದಾರೆ. ಗಾಯದ ನಡುವೆಯೂ ಈ ಪರಿಯ ಡಾನ್ಸ್ ನೋಡಿ ಉಫ್ ಎಂದಿದ್ದಾರೆ ಫ್ಯಾನ್ಸ್.
ಈ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಕಣ್ ಕಣ್ ಬಿಟ್ಟು ನೋಡುತ್ತಿದ್ದಾರೆ.
https://www.instagram.com/reel/DAiZu7QRntJ/?igsh=MTg2ZmhhYmRzZ2E2Yw==