newsics.com
ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಗಿಟಾರ್ ಮತ್ತು ಇತರ ಸಂಗೀತ ಸಲಕರಣೆ ಹಿಡಿದು ಗ್ರೂಪ್ ಒಂದು ಬಾರಿಸು ಕನ್ನಡ ಡಿಂಡಿಮವ ಹಾಡು ಹಾಡಿದ್ದು, ವೈರಲ್ ಆಗಿದೆ.
ಕುವೆಂಪು ಅವರ ರಚನೆಯ ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯಶಿವ! ಹಾಡಿಗೆ 2015ರಲ್ಲಿ ಎಸ್.ವಿ.ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಹಾಗೂ ಆರ್.ಸುನಿಲ್ ನಿರ್ದೇಶನ ಮಾಡಿ ವಿಡಿಯೋ ಹಾಡು ಬಿಡುಗಡೆ ಮಾಡಿದ್ದರು.
ನಮ್ಮ ಮೆಟ್ರೋದಲ್ಲಿ ಕನ್ನಡಮಯ ಎಂದು ಶಿವಾನಂದ ಗುಂಡನವರ್ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇವರ ಕನ್ನಡ ಅಭಿಮಾನಕ್ಕೆ ಫಿದಾ ಆಗಿದ್ದಾರೆ. ಒಟ್ಟು 32 ಸೆಕೆಂಡುಗಳ ವಿಡಿಯೋ ಇದಾಗಿದೆ. ಈ ವಿಡಿಯೋಗೆ ಹಲವಾರು ನೆಗೆಟಿವ್ ಮತ್ತು ಪಾಸಿಟಿವ್ ಕಮೆಂಟ್ ಗಳು ಬಂದಿದೆ.
Kannada Vibes in #NammaMetro #Bengaluru pic.twitter.com/2I283DVf4Z
— Shivanand Gundanavar (@shivanand087) September 28, 2024