newsics.com
ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ನೇಹಾ ಗೌಡ ಹಾಗೂ ಚಂದನ್ ದಂಪತಿ ಇದ್ದಾರೆ. ಈಗಾಗಲೇ ನೇಹಾ ಗೌಡ ಅವರ ಸೀಮಂತ ಬಹಳ ಅದ್ದೂರಿಯಾಗಿ ನಡೆದಿದೆ. ಇದೇ ವೇಳೆ ಸುಂದರವಾದ ಫೋಟೋಶೂಟ್ ಅನ್ನು ಮಾಡಿಸಿಕೊಂಡಿದ್ದಾರೆ. ಕನ್ನಡ ನೇಹಾ ಗೌಡ ಪ್ರೆಗ್ನೆನ್ಸಿ ಫೋಟೋ ನೋಡಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ.
ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಮೂಲಕ ಧಾರಾವಾಹಿ ಲೋಕಕ್ಕೆ ಕಾಲಿಟ್ಟಿದ್ದ ನಟಿ ಈ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದರು. ಕಿರುತೆರೆ ಲೋಕದಲ್ಲಿ ನಟಿ ನೇಹಾ ಗೌಡ ಅವರನ್ನು ಗೊಂಬೆ ಅಂತಲೇ ಕರೆಯುತ್ತಾರೆ.
ತುಂಬು ಗರ್ಭಿಣಿಯಾಗಿರುವ ನೇಹಾ ಗೌಡ ಪ್ರೆಗ್ನೆನ್ಸಿ ಫೋಟೊಶೂಟ್‌ಗಳನ್ನು ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಬಹಳ ಸುಂದರವಾಗಿ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ತಿಳಿ ಬಿಳಿ ಸೀರೆ ಉಟ್ಟುಕೊಂಡು ಪಕ್ಕಾ ಶಾಕುಂತಲೆ ರೀತಿಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊಗಳ್ನು ನೋಡಿ ಹಲವಾರು ಅಭಿಮಾನಿಗಳು ನಿಮ್ಮ ಫೋಟೋ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಶಾಕುಂತಲೆ ನ್ಯೂ ವರ್ಷನ್, ಆರಾಮವಾಗಿ ಹೆರಿಗೆಯಾಗಲಿ ಎಂದು ಅನೇಕರು ಕಾಮೆಂಟ್ ಮಾಡಿದ್ಧರೆ, ಇನ್ನು ಕೆಲವರು ನೇಹಾ ಅವರೇ ನಿಮಗೆ ಹೆಣ್ಣು ಮಗು ಆಗುತ್ತದೆ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.