newsics.com
ಪಲ್ಲವಿ ಹಿಂದೂ ಆಕೆಯನ್ನು ಕೊಲ್ಲುತ್ತೇನೆ ಎಂದು ಪುಟ್ಟ ಹುಡುಗಿ ದ್ವೇಷಪೂರಿತ ಮಾತುಗಳನ್ನು ಹೇಳಿದ್ದಾಳೆ. ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರು ಶಾಕ್ ಆಗಿದ್ದಾರೆ.
ಈ ಕುರಿತ ಪೋಸ್ಟ್ ಒಂದನ್ನು MeghUpdates ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಪಲ್ಲವಿ ಹಿಂದೂ, ನಾನು ಅವಳನ್ನು ಕೊಲ್ಲುತ್ತೇನೆ ಎಂದು ಮುಸ್ಲಿಂ ಬಾಲಕಿಯೊಬ್ಬಳು ತನ್ನ ಶಿಕ್ಷಕಿಗೆ ಹೇಳಿದ್ದಾಳೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಶಾಲಾ ಬಾಲಕಿಯೊಬ್ಬ ತನ್ನ ಶಿಕ್ಷಕಿಯೊಂದಿಗೆ ಮಾತುಕತೆ ನಡೆಸುತ್ತಿರುವ ದೃಶ್ಯವನ್ನು ಕಾಣಬಹುದು.

ಶಿಕ್ಷಕಿಯೊಂದಿಗೆ ಮಾತನಾಡುತ್ತಾ ನಿಂತ ಮುಸ್ಲಿಂ ಶಾಲಾ ಬಾಲಕಿ, ಪಲ್ಲವಿ ಹಿಂದೂ ಎಂಬ ಕಾರಣಕ್ಕೆ ಆಕೆಯನ್ನು ನಾನು ದೊಡ್ಡವಳಾದ ಮೇಲೆ ಬಂದೂಕಿನಿಂದ ಸಾಯಿಸುತ್ತೇನೆ. ನಮ್ಮ ಮನೆಯಲ್ಲಿ ಬಂದೂಕು ಇದೆ ಎಂದು ಹೇಳಿದ್ದಾಳೆ. ಬಾಲಕಿಯ ದ್ವೇಷಪೂರಿತ ಮಾತುಗಳ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಈ ಘಟನೆ ಎಲ್ಲಿ ನಡೆದಿದ್ದು, ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.