newsics.com
ಬೆಂಗಳೂರು: ನಿಮ್ಮ ಮಕ್ಕಳ ಬಗ್ಗೆ ಸ್ವಲ್ಪ ಕಾಳಜಿವಹಿಸಿ. ಯಾಕಂದರೆ ನಿಮಗೆ ಗೊತ್ತಿಲ್ಲದೆ ನಿಮ್ಮ ಮಕ್ಕಳ ಹೊಟ್ಟೆಗೆ ಸ್ಲೋ ಪಾಯಿಸನ್ ಸೇರುತ್ತಿದೆ.
ಈಗಿನ ಪರಿಸ್ಥಿತಿ ಹೇಗಿದೆ ಅಂದರೆ ಮನೆ ಆಹಾರ ಉತ್ತಮ ಅನ್ನೊ ಹಾಗಾಗಿದೆ. ಅಪರೂಪಕ್ಕೊಮ್ಮೆ ತಿನ್ನುವ ಆಹಾರ ಕೂಡ ಅನ್ಸೇಫ್ ಆರೋಗ್ಯಕ್ಕೆ ಅಂತಾಗಿದೆ. ಫುಡ್ಡಿಗಳನ್ನು ಸೆಳೆಯಲು ನಾನಾ ರೀತಿಯ ತಿನಿಸುಗಳು ಮಾರುಕಟ್ಟೆಗೆ ಪ್ರತಿ ನಿತ್ಯ ಲಗ್ಗೆ ಇಡಿತ್ತಿವೆ. ಆದರೆ ಮಾರ್ಕೆಟ್ ಟು ಪ್ಲೇಟ್ ನೀವೆನೂ ತಿನ್ನುತ್ತೀರಾ ಅನ್ನೊ ಬಗ್ಗೆ ಗಮನ ಇರಬೇಕು ಅಂತ ವೈದ್ಯರು ಎಚ್ಚರಿಸಿದ್ದಾರೆ. ಯಾಕಂದ್ರೆ ಬ್ಯಾನ್ ಇದ್ರೂ ಕೆಲವೊಂದು ಉತ್ಪನ್ನಗಳು ಬಳಕೆಯಲ್ಲಿದೆ. ಈ ಪೈಕಿ ಸಿಂಥೆಟಿಕ್ ಡೈ ಕಲರ್ ಕೂಡ ಒಂದು. ರಾಜ್ಯದಲ್ಲಿ ಸಿಂಥೆಟಿಕ್ ಡೈ ಕಲರ್ ನಿಷೇಧವಾಗಿದ್ರೂ, ಆಹಾರಗಳಲ್ಲಿ ಇದರ ಬಳಕೆ ಆಗ್ತಿದೆ. ಬಣ್ಣ ಬಣ್ಣದ ಸಿಂಥೆಟಿಕ್ ಡೈ ಕಲರ್ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾದ್ರೆ, ಮಕ್ಕಳಲ್ಲಿ ಹಾನಿಕಾರ ಬೊಜ್ಜು ಬೆಳೆಯುತ್ತದೆ
ಸಿಂಥೆಟಿಕ್ ಡೈ ಕಲರ್ನಲ್ಲಿ ಮೂಡ್ ಸ್ಟಿಮ್ಯೂಲೇಟ್ ಮಾಡುವ ಅಂಶ ಪತ್ತೆಯಾಗ್ತಿದೆ. ಈ ಆಹಾರ ಸೇವಿಸಿದಾಗ ಮೂಡ್ನಿಂದ ಆಕರ್ಷಣೆ ಉಂಟಾಗುತ್ತದೆ. ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತದೆ. ನಾಲಿಗೆ ರುಚಿ ಹತ್ತಿರುತ್ತೆ. ಕ್ರೇವಿಂಗ್ ಹೆಚ್ಚಾಗುತ್ತೆ. ಹೀಗಾಗಿ ಮಕ್ಕಳು ಹಠ ಮಾಡಲು ಶುರು ಮಾಡ್ತಾರೆ. ಹಠ ಮಾಡಿದ್ರು ಅಂತ ಕೊಡಿಸುವ ಫುಡ್ನಿಂದ ಕ್ಯಾಲರಿ ಹೆಚ್ಚಾಗುತ್ತೆ. ಇದು ಒಬೆಸಿಟಿಗೆ ಕಾರಣವಾಗುತ್ತೆ. ಬೊಜ್ಜಿನಿಂದ ನಾನಾ ಆರೋಗ್ಯ ಸಮಸ್ಯೆ ಶುರುವಾಗುತ್ತೆ.