newsics.com
ಮುಂಬೈ(ಮಹಾರಾಷ್ಟ್ರ): ಟ್ಯೂಷನ್ ಕ್ಲಾಸ್‌ಗೆ ಬರುತ್ತಿದ್ದ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಪೋಷಕರು ಟ್ಯೂಷನ್ ಶಿಕ್ಷಕನ ಬಟ್ಟೆ ಬಿಚ್ಚಿ ಥಳಿಸಿದ್ದಲ್ಲದೆ ರಸ್ತೆಯಲ್ಲಿ ಮೆರವಣಿಗೆ ಮಾಡಿರುವ ಘಟನೆ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.
ಬಳಿಕ ಆರೋಪಿ ಶಿಕ್ಷಕನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ಯೂಷನ್ ಶಿಕ್ಷಕನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಲಾಗಿದೆ.
13 ವರ್ಷದ ಬಾಲಕಿ ಆತನ ಟ್ಯೂಷನ್ ತರಗತಿಗೆ ಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಟ್ಯೂಷನ್ ಶಿಕ್ಷಕ ದಿನವೂ ಮೈಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ಬಗ್ಗೆ ಬಾಲಕಿ ಹೇಳಿದ್ದು, ಇದರಿಂದ ಎಚ್ಚೆತ್ತುಕೊಂಡ ಪೋಷಕರು ಆ ಟ್ಯೂಷನ್ ಕ್ಲಾಸ್‌ನ ಬೇರೆ ವಿದ್ಯಾರ್ಥಿನಿಯರನ್ನು ವಿಚಾರಿಸಿದಾಗ ಅವರಿಗೂ ಇದೇ ರೀತಿಯ ಅನುಭವವಾಗಿದ್ದು ಗೊತ್ತಾಯಿತು. ಆ ಶಿಕ್ಷಕನಿಗೆ ಬುದ್ಧಿ ಕಲಿಸಲು ನಿರ್ಧರಿಸಿ ಬಾಲಕಿಯರ ಪೋಷಕರು ಮತ್ತು ಇತರ ನಾಗರಿಕರು ಶಿಕ್ಷಕನನ್ನು ಥಳಿಸಿದರು.
ವಿರಾರ್‌ನಲ್ಲಿನ ಟ್ಯೂಷನ್ ತರಗತಿಗಳಿಂದ ಆ ಶಿಕ್ಷಕನನ್ನು ಹೊರಗೆಳೆದು ಥಳಿಸಿದ ಬಳಿಕ ಅವರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ
ನಂತರ ಆರೋಪಿ ಶಿಕ್ಷಕನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ ಎಂದು ವಿರಾರ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ವಿಜಯ್ ಪವಾರ್ ತಿಳಿಸಿದ್ದಾರೆ.
ಕುರ್ಚಿಗೆ ಕಟ್ಟಿ ಹಾಕಿ ಚಿತ್ರಹಿಂಸೆ ಕೊಟ್ಟು ಬೆಂಗಳೂರಲ್ಲಿ ಮಹಿಳೆಯ ಕೊಲೆ
https://www.newsics.com/2024/08/28/husband-and-wife-should-follow-thes
ಲವರ್ಸ್ ಎಂದು ಭಾವಿಸಿ ಸ್ವಂತ ಅಣ್ಣ-ತಂಗಿಯನ್ನೇ ಜೈಲಿಗೆ ಹಾಕಿದ ಪೊಲೀಸ್
ಭಾರತದಲ್ಲಿ ಭಾರೀ ರೈಲು ದುರಂತ ಸೃಷ್ಟಿಸಲು ರಾಮೇಶ್ವರಂ ಕೆಫೆ ಸ್ಫೋಟ ರೂವಾರಿ ಸೂಚನೆ!