newsics.com
ರಾಮನಗರ : ಪತಿಯೇ ಪತ್ನಿಯನ್ನ ಕೊಲೆ ಮಾಡಿ ಐದು ವರ್ಷಗಳ ನಂತರ ಪೊಲೀಸರಿಗೆ ಸೆರೆ ಸಿಕ್ಕಿರುವ ಅಪರೂಪದ ಘಟನೆ ಮಾಗಡಿಯಲ್ಲಿ ಜರುಗಿದೆ.
ಕಳೆದ 15 ದಿನಗಳ ಹಿಂದೆ ಬೆಂಗಳೂರಿನ ಮಾದನಾಯಕನಹಳ್ಳಿ ಗ್ರಾಮದ ದಿವ್ಯಾ ಎಂಬ ಗೃಹಿಣಿಯನ್ನು ತಾಲೂಕಿನ ಕುದೂರು ಬಳಿಯ ಚೀಲೂರು ಅರಣ್ಯದಲ್ಲಿ ಕೊಲೆ ಮಾಡಿ, ಮೃತದೇಹವನ್ನು ಅಲ್ಲಿಯೇ ಹೂತಿಟ್ಟು ಪರಾರಿಯಾಗಿದ್ದನು
ಸ್ನೇಹಿತನ ಪತ್ನಿಯ ಕೊಲೆ ಕೇಸ್‌ನಲ್ಲಿ ಪೊಲೀಸರ ಅತಿಥಿಯಾಗಿದ್ದ ಆರೋಪಿಯೊಬ್ಬ ಐದು ವರ್ಷಗಳ ಬಳಿಕ ತನ್ನ ಪತ್ನಿಯ ಕೊಲೆ ಕೇಸ್‌ನಲ್ಲಿ ಸಿಕ್ಕಿಬಿದ್ದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಐದು ವರ್ಷಗಳಿಂದ ತನ್ನ ಪತ್ನಿ ಓಡಿ ಹೋಗಿದ್ದಾಳೆ ಎನ್ನುತ್ತಲೇ ಪೊಲೀಸರಿಗೆ ಮಾತ್ರವಲ್ಲ, ಅಕ್ಕಪಕ್ಕದವರಿಗೂ ಚಳ್ಳೆಹಣ್ಣು ತಿನ್ನಿಸಿದ್ದ ಚಾಲಾಕಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮಾಗಡಿ ತಾಲೂಕಿನ ಹೂಜುಗಲ್ ಗ್ರಾಮದ ನಿವಾಸಿ ಕಿರಣ್ (37) ಸೆರೆಸಿಕ್ಕಿರುವ ಕೊಲೆ ಆರೋಪಿ.
ಕೊಲೆ ಆರೋಪಿಗಳಾದ ಶಶಾಂಕ್, ರೋಹಿತ್, ಭರತ್ ಎಂಬುವರನ್ನು ಮಾಗಡಿ ಪೊಲೀಸರು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಮಹಿಳೆಯ ಗಂಡ ಉಮೇಶ್ ಹಾಗೂ ಆತನ ಸ್ನೇಹಿತ ಕಿರಣ್ ತಲೆಮರೆಸಿಕೊಂಡಿದ್ದರು.
15 ದಿನಗಳ ಹಿಂದೆ ಆರೋಪಿ ಕಿರಣ್‌ನನ್ನು ಮಾಗಡಿ ಪೊಲೀಸರು ವಶಪಡಿಸಿಕೊಂಡು ಆತನ ಕೌಟುಂಬಿಕ ಹಿನ್ನೆಲೆ ವಿಚಾರಿಸಿದ್ದಾರೆ. ಆಗ ತನ್ನ ಪತ್ನಿಯನ್ನು 5 ವರ್ಷಗಳ ಹಿಂದೆ ತಾನೆ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ