newsics.com
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕೈಗೆ ಗುಂಡುಸೂಜಿ ಚುಚ್ಚಿ ಗಾಯ ಆಗಿರೋ ಘಟನೆ ಜನಸ್ಪಂದನೆ ಕಾರ್ಯಕ್ರಮದಲ್ಲಿ ನಡೆದಿದೆ.
ವಿಷಯ ತಿಳಿದ ಕೂಡಲೇ ವೈದ್ಯರು ದಿಢೀರ್ ದೌಡಾಯಿಸಿ ಚಿಕಿತ್ಸೆ ನೀಡಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿ 313 ರಿಂದ ಜನಸ್ಪಂದನೆ ಕಾರ್ಯಕ್ರಮಕ್ಕೆ ಬರುತ್ತಿರುವ ವೇಳೆ ಗುಂಡು ಸೂಜಿ ಚುಚ್ಚಿ ಸಿಎಂ ಸಿದ್ದರಾಮಯ್ಯ ಕೈಗೆ ಗಾಯವಾಗಿದೆ. ಈ ವೇಳೆ ಮುಖ್ಯಮಂತ್ರಿಗಳು ಬೆರಳಿಗೆ ಕರ್ಚೀಫ್ ಸುತ್ತಿಕೊಂಡು ಸಭೆಗೆ ತೆರಳಿದರು. ಕೂಡಲೆ ಸ್ಥಳಕ್ಕೆ ಆಗಮಿಸಿದ ವೈದ್ಯರು ಸಿದ್ದರಾಮಯ್ಯ ಬೆರಳಿಗೆ ಪ್ರಥಮ ಚಿಕಿತ್ಸೆ ನೀಡಿದರು.
ಕನ್ನಡದ ಖ್ಯಾತ ನಟಿಗೆ 3 ತಿಂಗಳು ಜೈಲು; 40 ಲಕ್ಷ ದಂಡ ವಿಧಿಸಿದ ಕೋರ್ಟ್!