newsics.com
ಕನ್ನಡದ ಪ್ರಖ್ಯಾತ ನಟಿ ಪದ್ಮಜಾ ರಾವ್ ಅವರಿಗೆ ಮಂಗಳೂರಿನ 8ನೇ ಜೆಎಂಎಫ್‌ಸಿ ನ್ಯಾಯಾಲಯ ಮೂರು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ 40.20 ಲಕ್ಷ ರೂಪಾಯಿ ದಂಡ ವಿಧಿಸಿದೆ. ಚೆಕ್ ಬೌನ್ಸ್ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಾಲಯ ನಟಿ ಪದ್ಮಜಾ ರಾವ್ ಅವರಿಗೆ ಈ ಶಿಕ್ಷೆಯನ್ನು ಪ್ರಕಟಿಸಿದೆ.
ತುಳು ಸಿನಿಮಾ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಅವರು ದಾಖಲಿಸಿದ್ದ ಕೇಸ್‌ನಲ್ಲಿ ಕೋರ್ಟ್ ಪದ್ಮಜಾ ರಾವ್ ಅವರಿಗೆ ಜೈಲು ಮತ್ತು ದಂಡದ ಶಿಕ್ಷೆ ವಿಧಿಸಿದೆ. 2021ರಲ್ಲಿ 41 ಲಕ್ಷ ಹಣ ಪಡೆದು ಆ ಬಳಿಕ ಹಿಂದಿರುಗಿಸದೇ ವಂಚಿಸಿದ್ದಾರೆ ಎಂದು ತುಳು ನಿರ್ದೇಶಕ ನಟಿ ಪದ್ಮಜಾ ರಾವ್ ವಿರುದ್ಧ ಈ ಪ್ರಕರಣ ದಾಖಲಿಸಿದ್ದರು.
ನಟಿ ಪದ್ಮಜಾ ರಾವ್ ಅವರಿಗೆ ಒಟ್ಟು 40.20 ಲಕ್ಷ ದಂಡವನ್ನು ವಿಧಿಸಿರುವ ನ್ಯಾಯಾಲಯ ಈ ದಂಡವನ್ನು ಕಟ್ಟಲು ವಿಫಲರಾದರೆ ಮೂರು ತಿಂಗಳುಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ. 40.17 ಲಕ್ಷ ರೂಪಾಯಿಯನ್ನು ದೂರುದಾರ ವೀರೇಂದ್ರ ಶೆಟ್ಟಿ ಅವರಿಗೆ ಹಾಗೂ ಉಳಿದ ಮೂರು ಸಾವಿರವನ್ನು ರಾಜ್ಯದ ಬೊಕ್ಕಸಕ್ಕೆ ತುಂಬಲು ನ್ಯಾಯಾಲಯ ಆದೇಶ ನೀಡಿದೆ.